November 22, 2024

ಧಾರವಾಡ: ಅದರಗುಂಚಿಯಲ್ಲಿ ಹಮ್ಮಿಕೊಳ್ಳಲಾಗಿ ಧಾರವಾಡ ಲೋಕಸಭಾ ವ್ಯಾಪ್ತಿಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಅದರಗುಂಚಿ ಗ್ರಾಮ ಪಂಚಾಯತ ವ್ಯಾಪ್ತಿಯ ಮುಖಂಡರು ಮತ್ತು ಕಾರ್ಯಕರ್ತರ ಚುನಾವಣಾ ಸಭೆ ಹಾಗೂ ಪಂಚಾಯತ್ ಎಲ್ಲಾ ಸದಸ್ಯರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿನೋದ್‌ ಅಸೂಟಿ ಅವರು ಭಾಗವಹಿಸಿ ಮಾತನಾಡಿದರು.

ಈ ವೇಳೆ ಮಾತನಾಡಿದ ಮಯೂರ ಜಯಕುಮಾರ, ಕೇಂದ್ರ ಸರಕಾರ ಸ್ಮಾರ್ಟ್ ಸಿಟಿ ಎಂಬ ಕಾಗೆ ಹಾರಿಸಿ ಜನರನ್ನು ಮರುಳು ಮಾಡಿತು. ಅದರ ಜೊತೆಗೆ ಜನರಿಗೆ ಮಂಕುಬೂದಿ ಎರಚುವ ಕಲೆ ಬಿಜೆಪಿಯ ನಾಯಕರಿಗೆ ಕರಗತವಾಗಿದೆ. ದೇಶದಲ್ಲಿ ಯಾವುದಾದರೂ ರಾಜ್ಯ ಕೊಟ್ಟ ಭರವಸೆಗಳನ್ನು ಕೇವಲ ಹತ್ತು ತಿಂಗಳಲ್ಲಿ ಪೂರೈಸಿದ್ದರೆ ಅದು ಕರ್ನಾಟಕದ ಕಾಂಗ್ರೆಸ್ ಸರಕಾರ. ಈ ಬಾರಿ ಧಾರವಾಡದಲ್ಲಿ ಯುವನಾಯಕ ವಿನೋದ ಅಸೂಟಿಯವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಜೆಡಿಎಸ್ ಹಾಗೂ ಬಿಜೆಪಿಯಿಂದ ಹಲವರು ಕಾಂಗ್ರೆಸ್‌ ಸೇರ್ಪಡೆಯಾದರು. ಮೇರುನಬಿ ನದಾಫ, ಶಂಕರಗೌಡ ನೀಲಪ್ಪಗೌಡ್ರ, ಗಿರಿಜಾ ದೂಳಿಕೊಪ್ಪ, ಸಾವಕ್ಕ ರೇವಣ್ಣವರ, ವಿ ಶಿ ಘಟಿಗೆಣ್ಣವರ, ಎಮ್ ವಿ ಕಳ್ಳಿಮನಿ, ಎನ್ ಎಮ್ ಬಾಗೇವಾಡಿ, ಎಮ್ ಎಮ್ ಮುದೆಣ್ಣವರ, ಎಫ್ ಆರ್ ನದಾಫ್, ಪಿ ಕೆ ಸಿಂದಗಿ, ಎಸ್ ಎಸ್ ಬಿಜಾಪುರ, ಬಿ ಕೆ ನದಾಫ್, ಎಸ್ ವಿ ಪುಂಡಪ್ಪನವರ, ಎಸ್ ಎಚ್ ನೀಲಪ್ಪಗೌಡ್ರ, ಎಸ್ ಎಮ್ ಕಂಟೆಪ್ಪಗೌಡ್ರ, ಎಸ್ ಎ ಬಿಜವಾಡ, ಎಮ್ ಬಿ ಬಡಿಗೇರ, ಡಿ ಎಮ್ ಕಮಲಸಾಬನವರ, ಎಚ್ ವಾಯ್ ಸೋಲಾರಗೊಪ್ಪ ಎಲ್ಲಾ ಸದಸ್ಯರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರುಗಳಾದ ಕುಸುಮಾವತಿ ಶಿವಳ್ಳಿ, ಅರವಿಂದ ಕಟಗಿ, ಅನಿಲಕುಮಾರ ಪಾಟೀಲ, ಗೌಡಪ್ಪಗೌಡ ಪಾಟೀಲ, ಷಣ್ಮುಖ ಶಿವಳ್ಳಿ, ಹಜರತ್ ಅಲಿ ಜೋಡಮನಿ, ಜಗನ್ನಾಥಗೌಡ ಸಿದ್ದನಗೌಡ್ರ, ರಮೇಶ ಕೊಪ್ಪದ, ಸುರೇಶ ಸವಣೂರ, ಮಲ್ಲಿಕಾರ್ಜುನಗೌಡ ಭರಮಗೌಡ್ರ, ಮಂಜುನಾಥ ಮಾಳಪ್ಪನವರ, ಮಹಾದೇವಗೌಡ ಈರನಗೌಡ್ರ, ಎಮ್ ಡಿ ನದಾಫ್, ಬಸವರಾಜ ಮಡಿವಾಳರ, ಪಕ್ಷದ ಮುಖಂಡರು, ಗ್ರಾಮದ ಹಿರಿಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *