September 17, 2024

ಹುಬ್ಬಳ್ಳಿ: ಉಚಿತ ಯೋಜನೆಗಳಿಂದ ದೇಶ ಅಭಿವೃದ್ಧಿ ಹಾಗೂ ಇಲ್ಲಿಯ ಜನತೆ ಸ್ವಾಭಿಮಾನಿಗಳು ಸಹ ಆಗಲ್ಲ. ಬೇಡುವಂತ ಪರಿಸ್ಥಿತಿ ಎದುರಾಗಲಿದೆ. ಆದರೆ ಪ್ರಧಾನಿ ಮೋದಿ ಅವರು ಉದ್ದೇಶ ಯಾರು ಸಹ ಬೇಡಿ ತಿನ್ನಬಾರದು ಸ್ವಾಭಿಮಾನಿಗಳಾಗಬೇಕು. ದೇಶದ ಆರ್ಥಿಕತೆಗೆ ಕೊಡುಗೆ ನೀಡುವಂತಾಗಬೇಕು ಎಂಬುವುದಿದೆ ಎಂದು ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸುಲಿಬೆಲಿ ಹೇಳಿದರು. ಗೋಕುಲ ರಸ್ತೆ ಡಾಲರ್ಸ್ ಕಾಲೋನಿಯ ಖಾಸಗಿ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಸಿಟಿಜನ್ ಫಾರ್ ಡೆವಲಪ್ಟೆಂಟ್ ಎಂಬ ಪ್ರಭುದ್ಧರ ಸಮಾರಂಭದಲ್ಲಿ ಮಾತನಾಡಿದರು.

ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ನಾಗರಿಕರ ವೇದಿಕೆ, ವೃತ್ತಿಪರರು ಮತ್ತು ಉದ್ಯಮಿಗಳ ಒಕ್ಕೂಟದಿಂದ ಲೋಕಸಭಾ ಅಭ್ಯರ್ಥಿ ಪ್ರಲ್ಲಾದ ಜೋಶಿಯವರೊಂದಿಗೆ ಪ್ರಬುದ್ಧ ಜೊತೆಗೆ ಚರ್ಚೆಯ ಮಹತ್ವದ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಹುಬ್ಬಳ್ಳಿ ಖಾಸಗಿ ಹೊಟೇಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಇದರಲ್ಲಿ ಯುವ ಸಮುದಾಯ ಕೂಡ ಭವ್ಯ ಭಾರತ ನಿರ್ಮಾಣದ ಕನಸನ್ನು ಹೊತ್ತು ಬಂದಿರುವುದು ನಿಜಕ್ಕೂ ವಿಶೇಷವಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಭಾಗವಹಿಸಿ ಮಾರ್ಮಿಕವಾಗಿ ಮೋದಿ ನೇತೃತ್ವದ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಕೊಂಡಾಡಿದರು.

ಇನ್ನು, ಸಾವಿರಾರು ಪ್ರಬುದ್ಧರು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮುಖ್ಯಸ್ಥರು, ಉದ್ಯಮಿಗಳು ಹಾಗೂ ನವೋದ್ಯಮಿಗಳು ಭಾಗವಹಿಸಿ ಪ್ರಹ್ಲಾದ ಜೋಶಿಯವರ ಬೆಂಬಲಕ್ಕೆ ನಿಂತಿರುವುದು ಕಾರ್ಯಕ್ರಮಕ್ಕೆ ಹೊಸ ಮೆರಗನ್ನು ತಂದಿದೆ. ಈ ನಡುವೆ ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ಮಾಲೀಕ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ ಅವರು ಜೋಶಿಯವರಿಗೆ ಮತದಾನ ಮಾಡುವಂತೆ ಮನವಿ ಮಾಡಿದರು.

Leave a Reply

Your email address will not be published. Required fields are marked *