July 11, 2025
CT-Ravi-1-16767990593x2

ಹುಬ್ಬಳ್ಳಿ: ಕಾಂಗ್ರೆಸ್‌ ಗ್ಯಾರಂಟಿ ಉದ್ದರಣೆಯಲ್ಲಿ ತೀರ್ಥ ಕೊಟ್ಟಂತೆ. ವೋಟ್ ಬ್ಯಾಂಕ್‌ಗಾಗಿ ಸೀಮಿತ ಇರೋದು ಕಾಂಗ್ರೆಸ್ ಗ್ಯಾರಂಟಿ. ಕಾಂಗ್ರೆಸ್ ಗ್ಯಾರಂಟಿ ಮಾಹಾವಂಚನೆಯ, ಕುತಂತ್ರದಿಂದ ಕೂಡಿರೋ ಗ್ಯಾರಂಟಿ. ಚುನಾವಣೆಗಾಗಿ ಕುತಂತ್ರದಿಂದ ಕೂಡಿರೋ ಗ್ಯಾರಂಟಿ. ಇದು ಬದುಕು ಬದಲಾಯಿಸೋ ಗ್ಯಾರಂಟಿ ಅಲ್ಲ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದರು.

ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೀವು ಅಧಿಕಾರದಲ್ಲಿದ್ದಾಗ ಏನು ಮಾಡಿದ್ರಿ? ಅನ್ನೋದು ಜನರ ಮುಂದೆ ಇಡಿ. ಸರ್ಕಾರದ ಬೊಕ್ಕಸದಿಂದ ಕೊಡ್ತಿರೋದು, ಜನ ಯಾರ ಅಪ್ಪನ ಹಣದಿಂದ ಕೊಟ್ರಿ ಅಂತಾ ಕೇಳ್ತಾರೆ. ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿದೆ. ಅಪನಂಬಿಕೆ ಹುಟ್ಟಿಸುತ್ತಿದೆ. ಕೇಂದ್ರದಿಂದ ನಮಗೆ ಮೋಸ ಆಗ್ತಿದೆ ಎಂದು ಅಪಪ್ರಚಾರ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದರು.

ಹತ್ತು ವರ್ಷದ ಕಾಂಗ್ರೆಸ್ ಸರ್ಕಾರದಲ್ಲಿ ನಮಗೆ ಬಂದಿರೋ ಹಣ ಕೇವಲ 1 ಲಕ್ಷ 42 ಸಾವಿರ ಕೋಟಿ.ಮೋದಿ ಕೊಟ್ಟಿರೋದು 5 ಲಕ್ಷ 29 ಸಾವಿರ ಕೋಟಿ ಕಾಂಗ್ರೆಸ್‌ನವರು ಜಾಣ ಕುರುಡಾಗಿದ್ದಾರೆ. ಇದು ಅವರಿಗೆ ಅರ್ಥ ಆಗತಿಲ್ಲ. ಕೇವಲ ಅಪಪ್ರಚಾರ ಮಾಡ್ತಿದ್ದಾರೆ. NDRS SDRF ವಿಚಾರದಲ್ಲಿ ಅಪಪ್ರಚಾರ ಮಾಡ್ತಿದೆ. ಕಾಂಗ್ರೆಸ್ ಕಾಲದಲ್ಲಿ ನಾವು 44 ಸಾವಿರ ಕೋಟಿ ಕೇಳಿದ್ದೆವೆ. ಅವರ ಕೊಟ್ಟಿದ್ದು ಕೇವಲ ಶೇಕಡಾ 8 ರಷ್ಟು. NDA ಅವಧಿಯಲ್ಲಿ ಸರ್ಕಾರ ಕೇಳಿರೋ ಶೇಕಡಾ 42 ರಷ್ಟು ಹಣ ಕೊಟ್ಟಿದೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಹೆಸರಲ್ಲಿ ವೋಟ್ ಕೇಳಿದ್ರೆ ಬರೋ ವೋಟ್ ಬರಲ್ಲ. ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಮಂತ್ರಿ ನಿಯೋಜಿತ ಅಭ್ಯರ್ಥಿಯಾಗಲು ಚರ್ಚೆ ನಡೆದಿತ್ತು. ಅದನ್ನು ಬೇಡ ಅಂದಿದ್ದು ಸಿದ್ದರಾಮಯ್ಯ. ಕಾಂಗ್ರೆಸ್ ಪೊಳ್ಳು, ಸುಳ್ಳಿಗೆ ಸಿಮೀತವಾಗಿದ್ದಾರೆ. ಕಾಂಗ್ರೆಸ್‌ಗೆ ನಿಯತ್ತು ಇಲ್ಲ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *