July 11, 2025
allwyn_260621_joshi1

ಹುಬ್ಬಳ್ಳಿ : ದಲಿತ ನಾಯಕ, ಹಾಲಿ ಸಂಸದ ಹಾಗೂ ಮಾಜಿ ಸಚಿವ ಶ್ರೀನಿವಾಸ ಪ್ರಸಾದ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀನಿವಾಸ ಪ್ರಸಾದ ಅವರು ದಲಿತ ಸಮಾಜದ ಶಕ್ತಿಯಾಗಿದ್ದರು. ರಾಜ್ಯದ ಹಿರಿಯ ಮುತ್ಸದ್ದಿ ನಾಯಕರಾಗಿ ಅಪೂರ್ವ ಸೇವೆ ಸಲ್ಲಿಸಿದ್ದಾರೆ. ಇವರ ಅಗಲಿಕೆಯಿಂದ ಸಮಾಜಕ್ಕೆ ತೀವ್ರ ನಷ್ಟ ಉಂಟಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಷಾಧ ವ್ಯಕ್ತಪಡಿಸಿದ್ದಾರೆ.

ಸಮಾಜದಲ್ಲಿ ಯಾವತ್ತೂ ಅನ್ಯಾಯ- ಅಸಮಾನತೆ ವಿರುದ್ಧ ಹೋರಾಡುತ್ತ, ದಲಿತರ ಪರ ಗಟ್ಟಿ ಧ್ವನಿಯಾಗಿದ್ದರು. ಸುದೀರ್ಘ ಕಾಲ ಲೋಕಸಭೆ ಸದಸ್ಯರಾಗಿ ಜನ ಸೇವೆಗೈದ ಇವರು, ಪ್ರಗತಿಪರ ಚಿಂತನೆಯುಳ್ಳ ರಾಜಕಾರಣಿ ಆಗಿದ್ದರೆಂದು ಜೋಶಿ ಸ್ಮರಿಸಿದ್ದಾರೆ.

 

Leave a Reply

Your email address will not be published. Required fields are marked *