February 15, 2025

ಹುಬ್ಬಳ್ಳಿ : ಅಂತಿಮ ಹಂತದಲ್ಲಿ ತಮಗೆ ಲೋಕಸಭೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದರು,ಪಕ್ಷಕ್ಕಾಗಿ ಹಗಲಿರುಳು ದುಡಿಯುವ ಮತ್ತು ಸಮಸ್ಯೆ ಬಂದಾಗ ಅದನ್ನು ಬಗೆಹರಿಸುವ ಮೈಗುಣವನ್ನು ರಜತ್ ಉಳ್ಳಾಗಡ್ಡಿ ಮಠ ಮತ್ತೊಮ್ಮೆ ಸಾಬೀತು ಪಡಿಸಿ ತಮ್ಮನ್ನು ತಾವು ಸೈ ಎನಿಸಿಕೊಂಡಿದ್ದಾರೆ.

 

ದಿಂಗಾಲೇಶ್ವರ ಶ್ರೀಗಳು ಚುನಾವಣಾ ಕಣಕ್ಕೆ ಧುಮುಕುವ ಮಾಹಿತಿ ಪಡೆಯುತ್ತಿದ್ದಂತೆ ಶ್ರೀಗಳನ್ನು ಮನವೊಲಿಸಲು ಹಲವು ಬಾರಿ ರಜತ್ ಉಳ್ಳಾಗಡ್ಡಿ ಮಠ ಪ್ರಯತ್ನಿಸಿದ್ದರು.ಅಲ್ಲದೆ ತಮ್ಮ ಮಗಳ ತೊಟ್ಟಿಲ ಕಾರ್ಯಕ್ರಮಕ್ಕೂ ಮನೆಗೆ ಆಗಮಿಸಿದ ಸಂದರ್ಭದಲ್ಲಿ ಶ್ರೀಗಳ ಜೊತೆಗೆ ಪ್ರಸ್ತುತ ರಾಜಕೀಯ ವಿಷಯಗಳ ಆಗುಹೋಗುಗಳ ಬಗ್ಗೆ ಮನವರಿಕೆ ಮಾಡಿ ಕೊಟ್ಟು. ತಾವು ಚುನಾವಣೆಗೆ ಸ್ಪರ್ಧಿಸುವದರಿಂದ ಏನಾಗಲಿದೆ ಎನ್ನುವುದನ್ನು ಮಾಹಿತಿ ನೀಡಿದ್ದರು ಎಂದು ಆಪ್ತ ಮೂಲಗಳು ತಿಳಿಸಿವೆ.

 

ಜೊತೆಗೆ ಶ್ರೀಗಳನ್ನು ಹೇಗಾದರೂ ಮಾಡಿ ಕಾಂಗ್ರೆಸ್ ಬೆಂಬಲಿಸುವಂತೆ ನೋಡಿಕೊಳ್ಳುವುದು ಜೊತೆಗೆ ನಾಮಪತ್ರ ವಾಪಸ್ ಹಿಂಪಡೆದು ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿಗೆ ಬೆಂಬಲ ನೀಡುವಂತೆ ಮನವಿ ಕೂಡ ಮಾಡಿದ್ದರು ಎನ್ನಲಾಗುತ್ತಿದೆ

 

ಇನ್ನು ಕಳೆದ ದಿನವಷ್ಟೇ ಈ ಬಗ್ಗೆ ಶ್ರೀಗಳನ್ನು ಭೇಟಿಯಾಗಿದ್ದಾರೆ ರಜತ್ ಉಳ್ಳಾಗಡ್ಡಿಮಠ, ರಾಜ್ಯದ ಉಪಮುಖ್ಯಮಂತ್ರಿಯೊಂದಿಗೆ ಸಂಪರ್ಕಿಸಿ ಶ್ರೀಗಳನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ರಾಜಕೀಯ ಬೆಳವಣಿಗೆಗೆ ರಜತ್ ಕೊಡುಗೆ ಕಾಂಗ್ರೆಸ್ ಗೆ ಹೇಗೆ ವರವಾಗಲಿದೆ ಎಂದು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *