October 13, 2025
2.5

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಹೊರ ತಂದಿರುವ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಭರವಸೆ ನೀಡಿರುವುದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೆಂಡಾಮಂಡಲವಾಗಿದ್ದಾರೆ. ಈ ಭರವಸೆ ಓದಿ ನನ್ನ ರಕ್ತ ಕುದಿಯುತ್ತಿದೆ. ನಾನೂ ಬಜರಂಗದಳ ಕಾರ್ಯಕರ್ತೆ ತಾಕತ್ತಿದ್ದರೆ ನನ್ನನ್ನು ಬಂಧಿಸಿ ಎಂದು ಕಾಂಗ್ರೆಸ್​ಗೆ ಸೆಡ್ಡು ಹೊಡೆದರು.

ದೇಶದ್ರೋಹಿ ಪಿಎಫ್ ಐ ಸಂಘಟನೆಯನ್ನು ದೇಶಭಕ್ತ ಬಜರಂಗದಳಕ್ಕೆ ಹೋಲಿಸಿರುವುದು ಸರಿಯಲ್ಲ. ಉಗ್ರ ಕೃತ್ಯ ಎಸಗುವವರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಸೋದರರಾಗಿದ್ದು, ದೇಶದ ಹಿಂದು ಯುವಜನರಲ್ಲಿ ಜಾಗೃತಿ ಕೆಲಸ ಮಾಡುತ್ತಿರುವ ಬಜರಂಗದಳ ವಿರೋಧಿ ಎನಿಸಿದೆ ಎಂದು ಚಾಟಿ ಬೀಸಿದ ಇವರು ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದರು.

Leave a Reply

Your email address will not be published. Required fields are marked *