November 22, 2024

ಮನೆಯಿಂದಲೆ ಮತದಾನ ಮಾಡಲು ನೋಂದಾಯಿಸಿ ಕೊಂಡವರಲ್ಲಿ 33 ಮಂದಿ ಮತದಾನ ಮಾಡುವ ವೇಳೆಗೆ ಮೃತಪಟ್ಟಿದ್ದಾರೆ. 9,152 ಮತದಾರರು 80 ವರ್ಷಕ್ಕಿಂತ ಮೇಲ್ಪಟ್ಟವರಗಿದ್ದು ಮನೆಯಿಂದ ಮತ ಚಲಾಯಿಸಲು ನೋಂದಣಿ ಮಾಡಿಸಿಕೊಂಡಿದ್ದರು , ಏ.30ರವರೆಗೆ 2,264 ಮಂದಿ ಮತ ಚಲಾಯಿಸಿದ್ದಾರೆ. 119 ಅಂಗವಿಕಲರಲ್ಲಿ 18 ಮಂದಿ ಮತದಾನ ಮಾಡಿದ್ದಾರೆ. ಈಗ ಸದ್ಯ ಮನೆಯಿಂದ ಮತದಾನ ಮಾಡಲು ನೋಂದಾಯಿಸಿಕೊಂಡವರಲ್ಲಿ 33 ಮಂದಿ ಸಾವನ್ನಪ್ಪಿದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.

ಮೇ 2ರಿಂದ 4ರವರೆಗೆ ಮತ ಚಲಾಯಿಸಲು ವಿಧಾನಸಭೆ ಚುನಾವಣೆಗೆ ಅಂಚೆ ಮತದಾನ ಮಾಡಲು 661 ಮತದಾರರು ನೋಂದಾಯಿಸಿಕೊಂಡಿದ್ದರು . ಕೇಂದ್ರ ಚುನಾವಣೆ ಆಯೋಗದ ನಿರ್ದೇಶನದಂತೆ 28 ವಿಧಾನಸಭೆ ಕ್ಷೇತ್ರಗಳಲ್ಲೂ ಅಂಚೆ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು . ಮೇ 2ರಿಂದ 4 ರ ವರೆಗೆ ಮೂರು ದಿನ ಬೆಳಿಗ್ಗೆ 9ರಿಂದ ಸಂಜೆ 5ರೊಳಗೆ ಅಂಚೆ ಮತಚೀಟಿಯಲ್ಲಿ ಮತದಾನ ಮಾಡಬಹುದು ಎಂದು ಬಿಬಿಎಂಪಿ ತಿಳಿಸಿದೆ. 12 ವಿವಿಧ ಇಲಾಖೆಗಳ ಅವಶ್ಯಕ ಸೇವೆಗಳಲ್ಲಿ ನಿರತಾಗಿ ಗೈರಾಗುವ ಮತದಾರರಿಗೆ ಅಂಚೆ ಮೂಲಕ ಮತ ಚಲಾಯಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರು ಕೇಂದ್ರ ಚುನಾವಣೆ ಜಿಲ್ಲೆ ವ್ಯಾಪ್ತಿಯಲ್ಲಿ 71, ಉತ್ತರದಲ್ಲಿ 120, ದಕ್ಷಿಣದಲ್ಲಿ 168, ನಗರದಲ್ಲಿ 302 ಮಂದಿ ಸೇರಿದಂತೆ 661 ಮಂದಿ ನೋಂದಾಯಿಸಿಕೊಂಡಿದ್ದು, ಆಯಾ ವಿಧಾನಸಭೆ ಕ್ಷೇತ್ರದಲ್ಲಿ ಮತ ಚಲಾಯಿಸಲಿದ್ದಾರೆ.

Leave a Reply

Your email address will not be published. Required fields are marked *