
ಜೇರ್ವಗಿ ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೆಳಗ್ಗೆ ನಿಗಧಿತ ಸಮಯದಲ್ಲಿ ಕಾರ್ಯಕ್ರಮ ಸ್ಥಳಕ್ಕೆ ಬರಲಾಗಲಿಲ್ಲ. ಮಂಗಳೂರಿನಿಂದ ಬೆಳಗ್ಗೆ 12 ಗಂಟೆಗೆ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.ಆದರೆ ಅಲ್ಲಿಂದ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಜೇವರ್ಗಿ ಬರಬೇಕೆಂದರೆ ಮೋಡ ಕವಿದ ವಾತಾವರಣ ಇರುವುದರಿಂದ ಸಾಧ್ಯವಾಗಲಿಲ್ಲ. ಮಳೆಯ ಕಾರಣದಿಂದ ಅವರನ್ನು ರಸ್ತೆ ಮೂಲಕ ಕರೆ ತರಯವ ಯತ್ನ ನಡೆದಿದೆ. ಆರಂಭದಲ್ಲೆ ಗುಡುಗು ಸಿಡಿಲಿನ ಆರ್ಭಟದ ಮಧ್ಯೆ ಭಾರಿ ಮಳೆ ಅಡ್ಡಿಯಾಗಿದೆ.ಇದರ ಮಧ್ಯೆಯೂ ಜನ ರಾಹುಲ್ ಗಾಗಿ ಕಾದು ನಿಂತಿದ್ದಾರೆ.
ಕಾಂಗ್ರೆಸ್ ಯುವರಾಜನ ನೋಡಲು ಜನರು ಜಡಿವ ಮಳೆ ಮಧ್ಯೆ ಕಾತುರದಿಂದ ಕಾಯುತ್ತಿದ್ದರು . ಈ ಸುರಿವ ಮಳೆಯಲ್ಲಿ ಕಾಯುತ್ತಿರುವ ಜನರನ್ನು ಉದ್ದೇಶಿಸಿ ಮಾತನಾಡಿದ ಅಭ್ಯರ್ಥಿ ಡಾ.ಅಜಯಸಿಂಗ್ ಮಳೆ ಒಳ್ಳೆಯ ಸಂಕೇತ. ರೈತರಿಗೆ ಸುಭ ಸೂಚನೆ. ಇದರೊಂದಿಗೆ ರಾಜ್ಯವನ್ನಾಳಿದ ಭ್ರಷ್ಟ ಸರಕಾರವನ್ನು ಕಿತ್ತೊಗೆಯಲು ವೇದಿಕೆಯೂ ಆಗಲಿದೆ. ಇದೇ ವೇಳೆ ಬಿ.ಆರ್.ಪಾಟೀಲ, ಡಾ.ಶರಣಪ್ರಕಾಶ ಪಾಟೀಳ, ಕನೀಜ್ ಫಾತಿಮಾ, ಎಂ.ವೈ.ಪಾಟೀಲ, ಸುಭಾಷ್ ರಾಠೋಡ್, ತಿಪ್ಪಣ್ಣಪ್ಪ ಕಮಕನೂರು ಮಾತನಾಡಿದರು.