October 13, 2025
27.6

ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ನಾನಾ ವಿಚಾರಗಳು ಮುನ್ನೆಲೆಗೆ ಬರುವುದು ನಡೆಯುತ್ತಿರುತ್ತವೆ. ಕಲಬುರಗಿ ಜಿಲ್ಲೆಯಲ್ಲಿ ಅಂಥದ್ದೇ ಒಂದು ಸಂಗತಿ ಬೆಳಕಿಗೆ ಬಂದಿದೆ , ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಭಾಗಿಯಾಗಿರುವ ನಿರ್ಮಲಾ ಸೀತಾರಾಮನ್, ಸುಭಾಷ್ ಗುತ್ತೇದಾರ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ಸುಭಾಷ್ ಗುತ್ತೇದಾರ್ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಈಗ ಐದನೇ ಬಾರಿ ನೀವು ಅವರನ್ನು ಆಶೀರ್ವದಿಸಬೇಕು ಎನ್ನುವ ಮೂಲಕ ಅವರಿಗೇ ಮತ ಚಲಾಯಿಸುವಂತೆ ಮನವಿ ಮಾಡಿದರು ಈದೆ ವೇಳೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿಷಯವೊಂದನ್ನು ಪ್ರಸ್ತಾಪ ಮಾಡಿದ್ದಾರೆ.
ಆಳಂದದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗದ ಪೂಜೆ ಕುರಿತ ವಿಚಾರವನ್ನು ಪ್ರಸ್ತಾಪಿಸಿದರು , ದರ್ಗಾದಲ್ಲಿನ ಶಿವಲಿಂಗ ಪೂಜೆ ಅವಕಾಶ ನಮಗೆ ಬೇಕು ಶಿವಲಿಂಗ ಪೂಜೆ ನಮ್ಮ ಹಕ್ಕು, ಆದರೆ ಪೂಜೆ ಮಾಡುವುದಕ್ಕೂ ಸದ್ಯ ಜೀವಭಯ ನಿರ್ಮಾಣವಾಗಿದೆ, ಪೂಜೆ ಮಾಡಲು ಕಾನೂನು ಹೋರಾಟ ಮಾಡಬೇಕಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Leave a Reply

Your email address will not be published. Required fields are marked *