November 22, 2024

ಬೆಳಗಾವಿ ಸುವರ್ಣ ಸೌಧ, ರಾಜ್ಯದ ಜನತೆ ಸಮಸ್ಯೆಗಳನ್ನು, ರಾಜ್ಯದ ಅಭಿವೃದ್ಧಿಯನ್ನು ಪರಿಹರಿಸುವ ಒಂದು ಮೂಲ ಕೇಂದ್ರ. ಆದರೆ ಸುವರ್ಣ ಸೌಧದ ಹತ್ತಿರ ಇರುವ ಗ್ರಾಮ ಹಲಗಾದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಹಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪಾಟೀಲ ಗಲ್ಲಿ ಮತ್ತು ಬಸ್ತಿ ಗಲ್ಲಿಯಲ್ಲಿ ಕುಡಿಯೋ ನೀರಿನ ಸಮಸ್ಯೆ ಕಾಡುತ್ತಿದೆ. ಏಳು ಎಂಟು ವರ್ಷಗಳಿಂದ ಸರಿಯಾಗಿ ನೀರಿನ ಸೌಲಭ್ಯಗಳಿಲ್ಲದಿದ್ದರು ನೀರು ಬಿಲ್ ಮಾತ್ರ ಮುಗಿಲೇರಿದ.

ಹೌದು ಬೆಳಗಾವಿ ಸುವರ್ಣ ಸೌಧ ಹತ್ತಿರ ಇರುವ ಹಲಗಾ ಗ್ರಾಮದಲ್ಲಿ ನೀರಿನ ಸಮಸ್ಯೆ ಕಾಡುತ್ತಿದ್ದು, ಆದರೆ ನೀರಿನ ಸಮಸ್ಯೆ ಪರಿಹರಿಸಲು ಹಲವಾರು ಬಾರಿ ಗ್ರಾಮಸ್ಥರು ಹಲಗಾ ಗ್ರಾಮ ಪಂಚಾಯತಿಗೆ ಮನವಿ ಮಾಡಿದ್ದೆವೆ, ಮನವಿ ತೆಗೆದುಕೊಂಡು ಜಿಲ್ಲಾ ಪಂಚಾಯತಿಗೆ ಹೋಗಿ ಸಮಸ್ಯೆ ಪರಿಹರಿಸುತ್ತೇವೆ ಹಾಗೂ ಟ್ಯಾಂಕರ್ ನೀರು ಪೂರೈಕೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಹಲಗಾ ಗ್ರಾಮ ಪಂಚಾಯತಿಯವರು ಟ್ಯಾಂಕರ್ ನೀರು ಸಹ ಪೂರಯಗಕೆ ಮಾಡದೆ, ಯಾವುದಕ್ಕೂ ಕ್ಯಾರೆ ಎನ್ನುತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ನೀರು ಸರಿಯಾಗಿ ಬರದಿದ್ದರು ಬಿಲ್ ಮಾತ್ರ 3000 ಬಂದಿರುವು ಹಲಗಾ ಗ್ರಾಮಸ್ಥರಿಗೆ ಆಗಾತವನ್ನುಂಟು ಮಾಡಿದೆ. ಇಗ ಗ್ರಾಮ ಪಂಚಾಯತಿಗೆ ಕೇಳಲು ಬಂದರೆ ಎರಡು ದಿನದಲ್ಲಿ ನೀರು ಪೂರೈಕೆ ಮಾಡುತ್ತೇವೆ ಎಂದು ಗಾಳಿ ಮಾಡು ಹೇಳುತ್ತಿದ್ದಾರೆ. ಜೊತೆ ಹಲಗಾ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಸಹ ನಡೆದಿಲ್ಲ. ಕುಡಿಯುವ ನೀರಿನ ಸಮಸ್ಯೆ ಮಾತ್ರವಲ್ಲದೇ, ಗಟಾರ ಸ್ವಚ್ಚತೆ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಈ ವಿಚಾರವಾಗಿ ಮೇಲಾಧಿಕಾರಿ ಗಮನ ಹರಿಸಬೇಕು. ಕುಡಿಯೋ ನೀರಿನ ವ್ಯವಸ್ಥೆ ಹಾಗೂ ಗಟಾರ ಸ್ವಚ್ಚತೆ, ಹಲಗಾ ಗ್ರಾಮದ ಅಭಿವೃದ್ಧಿ ವಿಚಾರವಾಗಿ ಮೇಲಾಧಿಕಾರಿ ಗಮನ ಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ನಮ್ಮ ಬಿ.ನ್ಯೂಸ್ ಸುದ್ಧಿ ವಾಹಿಣಿ ಮೂಲಕ ಮೇಲಾಧಿಕಾರಿಗಳಿಗೆ ಮನವಿ ಮಾಡಿದರು.

Leave a Reply

Your email address will not be published. Required fields are marked *