ಬೆಳಗಾವಿ ನಗರದಲ್ಲಿ ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ 132 ನೇ ಜಯಂತೋತ್ಸವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಅಶೋಕ ಚಕ್ರ ವೃತ್ತದಿಂದ ಭೀಮಜ್ಯೋತಿಗೆ ಚಾಲನೆ ನೀಡುವ ಮೂಲಕ ಮೆರವಣಿಗೆ ನಡೆಯಿತು.
ಮೆರವಣಿಗೆ ಮೂಲಕ ಅಂಬೇಡ್ಕರ್ ಉದ್ಯಾನವನಕ್ಕೆ ಆಗಮಿಸಿ ಅಂಬೇಡ್ಕರ ಪುತ್ತಳಿಗೆ ಪೂಜೆ ಸಲ್ಲಿಸಲಾಯಿತು.
ನಂತರ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಆಯುಕ್ತರು, ಜಿಲ್ಲಾ ಪಂಚಾಯತ್ ಸಿ.ಇ.ಓ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು’, ಪಾಲಿಕೆ ಅಧಿಕಾರಿಗಳು, ಎಲ್ಲರು ಅಂಬೇಡ್ಕರ ಪುತ್ತಳಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ನಂತರ ಸರ್ವ ಪಕ್ಷದ ಜನಪ್ರತಿನಿಧಿಗಳು ಆಗಮಿಸಿ, ಜಯಂತಿ ಅಂಗವಾಗಿ ಅಂಬೇಡ್ಕರ ಅವರಿಗೆ ನಮನ ಸಲ್ಲಿಸಿ ಪುಷ್ಪಾರ್ಚೆನೆ ಮಾಡಿದರು. ಲಕ್ಷ್ಮೀ ಹೆಬ್ಬಾಳ್ಕರ, ಸತೀಶ ಜಾರಕಿಹೊಳಿ, ಡಾ.ರವಿ.ಪಾಟೀಲ, ಅನಿಲ ಬೆನಕೆ, ಪೀರೋಜ್ ಶೆಟ್, ಕಿರಣ ಜಾದವ, ರಾಜು ಶೆಟ್, ರಮಾಕಾಂತ ಕಂಡೋಸ್ಕರ, ಪ್ರಭಾವತಿ ಚಾವಡಿ ಹಲವು ರಾಜಕೀಯ ಮುಖಂಡರು ಆಗಮಿಸಿದ್ದರು. ಅಧಿಕಾರಿಗಳು ಗಣ್ಯರು ಎಲ್ಲರು ಕೂಡ, ಅಂಬೇಡ್ಕರ ಅವರ ತತ್ವ, ವಿಚಾರ ಸಿದ್ದಾಂತ ಅವರ ಸಾಮಾಜಿಕ ಕೊಡುಗೆಗಳನ್ನು ತಮದೆ ದಾಟಿಯಲ್ಲಿ ಹೇಳಿದರು.