October 13, 2025
14

ಟಿಕೇಟ್ ಬದಲಾವಣೆ ಮಾಡದಿದ್ದರೆ ಬಂಡಾಯ ಸ್ಪರ್ಧೆ ಖಚಿತ,ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹೊರವಲಯದಲ್ಲಿದ್ದ ರಾಠಿ ರಿಸೋಟನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಕರೆದ ಶಾಸಕ ಮಹದೇವಪ್ಪ ಯಾದವಾಡ ಈ ಸಂಧರ್ಭದಲ್ಲಿ ಮಾತನಾಡಿ ನಾವು ರಾಮದುರ್ಗ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಪಕ್ಷದ ಹೈಕಮಾಂಡ್ ಟಿಕೆಟ್ ತಪ್ಪಿಸಿ ಶಾಕ್ ನೀಡಿದೆ.ಟಿಕೆಟ್ ಕೈತಪ್ಪಿದ್ದಕ್ಕೆ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಬಂಡಾಯ ಭುಗಿಲೆದ್ದಿದೆ, ತಾಲೂಕಿನ ಬಿಜೆಪಿ ಟಿಕೆಟ್ ಪ್ರಮುಖ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ಒಂದೆಡೆ ಸೇರಿ ಬಿಜೆಪಿ ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಿಜೆಪಿ ಹೈಕಮಾಂಡ್ ಕ್ಷೇತ್ರದ ಟಿಕೆಟ್ ಚಿಕ್ಕರೇವಣ್ಣ ಅವರಿಗೆ ನೀಡಿದೆ ಬಿಜೆಪಿ ಪಕ್ಷ ಮೂಲ ಬಿಜೆಪಿಗರಿಗೆ ಟಿಕೆಟ್ ವಂಚಿಸಿ ಅನ್ಯಾಯ ಮಾಡಿದೆ,ತಾಲೂಕಿನ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದ್ದರೆ ನಾವು ಒಮ್ಮತದಿಂದ ಬೆಂಬಲ ಸೂಚಿಸುತ್ತಿದ್ದೇವು
ಆದರೆ ಪಕ್ಷಕ್ಕೆ ನಿನ್ನೆ ಮೊನ್ನೆ ಬಂದವರಿಗೆ ಟಿಕೆಟ್ ನೀಡಿರುವುದು ಸಹಿಸಲಾಗದು ಕೂಡಲೇ ಟಿಕೆಟ್ ಬದಲಾವಣೆಯಾಗಬೇಕು ಇರದಿದ್ದರೆ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಬಿಜೆಪಿ ಶಾಸಕ ಮಹದೇವಪ್ಪ ಯಾದವಾಡ ಹೈಕಮಾಂಡಗೆ ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *