ಬಿಜೆಪಿ ಬೆಳಗಾವಿ ಜಿಲ್ಲೆತ 18 ಮತಕ್ಷೇತ್ರದಲ್ಲಿ ಒಂದೇ ಒಂದು ಜೈ ಸಮಾಜ ಅಭ್ಯರ್ಥಿಗೆ ನೀಡಿದ್ದಾರೆ ನಮಗೆ ಅಸಮಾಧಾನವಾಗಿದೆ. ಜೊತೆಗೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರ ಅಭ್ಯರ್ಥಿ ವಿಚಾರ, ಸಂಜಯ ಪಾಟೀಲ್ ಅವರಿಗೆ ಟಿಕೆಟ್ ನೀಡಬೇಕಿತ್ತು. ಬಿಜೆಪಿ ಪಕ್ಷ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಮರುಪರಿಶೀಲನೆ ಮಾಡಿ ಸಂಜಯ ಪಾಟೀಲ್ ಅವರಿಗೆ ಟಿಕೆಟ್ ನೀಡಬೇಕು ಎಂದು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಜೈನ್ ಸಮಾಜ ಮುಖಂಡರು ಬಿಜೆಪಿ ಪಕ್ಷಕ್ಕೆ ಮನವಿ ಮಾಡಿದರು.
ತೇರದಾಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಜೈನ ಸಮಾಜಕ್ಕೆ ಟಕೆಟ್ ನೀಡಬೇಕು. ತೇರದಾಳ ಮತಕ್ಷೇತ್ರದಲ್ಲಿ ಜೈನ ಸಮಾಜ ಇಬ್ಬರು ಪ್ರಭಾವಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದು, ಅವರಲ್ಲಿ ಒಬ್ಬರಿಗೆ ಟಕೆಟ್ ನೀಡಬೇಕು ಎಂದು ಎಂದು ಕಾಂಗ್ರೆಸ್ ಪಕ್ಷಕ್ಕೆ ಮನವಿ ಮಾಡಿದರು. ಜೈನ ಸಮಾಜ ಎಲ್ಲ ಕ್ಷೇತ್ರದಲ್ಲಿ ಮುಂಚುನಿಯಲ್ಲಿದ್ದೆವೆ. ಒಟ್ಟಾರೆಯಾಗಿ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಜೈನ್ ಸಮಾಜಕ್ಕೆ ಟಿಕೆಟ್ ನೀಡಬೇಕು, ಜೈನ ಸಮಾಜದವರು ರಾಜ್ಯದಲ್ಲಿ 50 ಲಕ್ಷ ಜನ ಬಲವನ್ನು ಹೊಂದಿದ್ದೇವೆ, ನಮ್ಮ ಸಮಾಜಕ್ಕೂ ಟಿಕೆಟ್ ನೀಡಬೇಕು ಎಂದರು.