September 16, 2024

ಬೆಳಗಾವಿ ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಭಾರತೀಯ ಜನತಾ ಪಕ್ಷವು ಹೊಸ ಮುಖವನ್ನಾ ಪ್ರಕಟಿಸಿದೆ ..
ಹಾಲಿ ಶಾಸಕ ಅನಿಲ ಬೆನಕೆ ಅವರಿಗೆ ಟಿಕೆಟ್ ನಿರಾಕರಿಸಿ .. ಡಾ. ರವಿ ಪಾಟೀಲ್ ಅವರಿಗೆ ಟಿಕೆಟ್ ನೀಡಿದೆ . ಡಾ.ಪಾಟೀಲರು ವೈದ್ಯಕೀಯ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ಪ್ರಬಲ ಸ್ಪರ್ಧಿಯನ್ನಾಗಿ ಬಿಜೆಪಿ ಆಯ್ಕೆ ಮಾಡಿ ಮೊದಲ ಪಟ್ಟಿಯಲ್ಲಿ ಡಾ. ರವಿ ಪಾಟೀಲ್ ಅವರಿಗೆ ಬೆಳಗಾವಿ ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ಟಿಕೆಟ್ ನೀಡಿದ್ದಾರೆ .

52 ನೇ ವಯಸ್ಸಿನಲ್ಲಿ ಎಂಬಿಬಿಎಸ್ ಮತ್ತು ಎಂಎಸ್ (ಆರ್ಥೋ) ಪದವಿ ಪಡೆದಿರುವ ಡಾ.ರವಿ ಬಿ.ಪಾಟೀಲ್.
ಬೆಳಗಾವಿಯ KLEs ಜವಾಹರ್ ಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಇವರು ತಮ್ಮ MBBS ಗಾಗಿ 1989-1995 ಮತ್ತು MS (ಆರ್ಥೋ) ಗಾಗಿ 1996-1999 ವರೆಗೆ ಅಧ್ಯಯನ ಮಾಡಿದರು.
1999 ರಲ್ಲಿ, ಡಾ. ರವಿ ಪಾಟೀಲ್ ಅವರು ವಿಜಯ ಆರ್ಥೋ ಮತ್ತು ಟ್ರಾಮಾ ಸೆಂಟರ್ಅನ್ನು ಸ್ಥಾಪಿಸಿದರು.
ಡಾ. ಪಾಟೀಲರು ತಮ್ಮ ಪರೋಪಕಾರಿ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ, ಹೈಪೋಥೈರಾಯ್ಡಿಸಮ್/ಬೊಜ್ಜು ಮತ್ತು ಆಸ್ಟಿಯೊಪೊರೋಸಿಸ್‌ನಂತಹ ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರಿಗೆ ತಿಳಿಸಲು ನಿಯಮಿತವಾಗಿ ಉಚಿತ ಆರೋಗ್ಯ ಶಿಬಿರಗಳನ್ನುಕೋಡಾ ನಡೆಸುತ್ತಾರೆ. ವೈದ್ಯಕೀಯ ವೃತ್ತಿಪರರಾಗಿರುವ ಡಾ. ರವಿ 99 ಹಾಸಿಗೆಗಳ, ಸುಸಜ್ಜಿತ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ, 300 ಸಿಬ್ಬಂದಿಗಳು ಹಗಲಿರುಳು ಕೆಲಸ ಮಾಡುತ್ತಿದ್ದಾರೆ.

ಇದೆಲ್ಲದರ ಜೊತೆಗೆ ಡಾ. ರವಿ ಪಾಟೀಲ ಆಯುರ್ವೇದ ವೈದ್ಯಕೀಯ ಕಾಲೇಜು, ಹೊನಗಾದ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬೆಳಗಾವಿಯ ಡಾ. ರವಿ ಪಾಟೀಲ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ, ಮತ್ತು 24×7 ಸೇರಿದಂತೆ ಹಲವಾರು ಆರೋಗ್ಯ ಸಂಸ್ಥೆಗಳನ್ನು ಕೋಡಾ ಸ್ಥಾಪಿಸಿದ್ದಾರೆ.

Leave a Reply

Your email address will not be published. Required fields are marked *