September 19, 2024

ಬೆಳಗಾವಿಯ ಬಿಜೆಪಿಯ ಮತ್ತೊಂದು ವಿಕೆಟ್ ಕೆಳಗೆ ಬಿದ್ದಿದೆ . ವಿಧಾನ ಪರಿಷತ್ ಸದಸ್ಯ ಮತ್ತು ಪಕ್ಷದ ರಾಜ್ಯ ಘಟಕ ಉಪಾಧ್ಯಕ್ಷ ಲಕ್ಷ್ಮಣ ಸವದಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ತೀರ್ಮಾನ ಪ್ರಕಟಿಸಿದ್ದಾರೆ. .

ಅಥಣಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಲಕ್ಷ್ನಣ ಸವದಿಗೆ ಇದೀಗ ಅಸಮಾಧಾನ .ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಿರುವ ಹಿನ್ನಲೆ ಸವದಿಗೆ ಬಹಳ ಬೇಸರ ಮೂಡಿಸಿ ಪಕ್ಷದಿಂದ ಹೊರಬೀಳುವ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೇರೇಪಿಸಿದೆ.ಅಧಿಕಾರದ ಲಾಲಸೆ ತನಗಿಲ್ಲ ಮತ್ತು ಸ್ವಾಭಿಮಾನವನ್ನು ಅಡವಿಟ್ಟು ಪಕ್ಷದಲ್ಲಿ ಮುಂದುವರಿಯುವುದು ತನ್ನಿಂದಾಗದ ಕೆಲಸ ಎಂದು ಸವದಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

ಅದೇ ರೀತಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯ ಟಿಕೆಟ್ ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧನ ಭುಗಿಲೆದಿದ್ದು.ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಟಿಕೆಟನ್ನ 189 ಕ್ಷೇತ್ರಗಳಿಗೆ ಘೋಷಣೆ ಮಾಡಿರುವ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧನ ವ್ಯಕ್ತವಾಗಿದೆ ,ಯಾವುದೇ ಕಾರಣವಿಲ್ಲದೇ ನಾನು ನಿವೃತ್ತಿ ಘೋಷಣೆ ಮಾಡಲು ಸಿದ್ಧನಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ,ಯಾವುದೇ ಸ್ಥಾನಮಾನ ಇಲ್ಲದೇ ಎರಡೂ ವರ್ಷದಿಂದ ಪಕ್ಷದಲ್ಲಿದ್ದೇನೆ.ಯಾವುದೇ ಅಧಿಕಾರ ಇಲ್ಲದೆ ಪಕ್ಷ ಸಂಘಟನೆ ಮಾಡಿದ್ದೇನೆ.ಎಷ್ಟೋ ಕೆಲಸಗಳನ್ನು ನಮ್ಮ ಮಂತ್ರಿಗಳ ಮುಖಾಂತರ ಮಾಡಿಸಿದ್ದೇನೆ.ಈಗ ಯಾವುದೇ ಕಾರಣವಿಲ್ಲದೇ ನಾನು ನಿವೃತ್ತಿ ಘೋಷಣೆ ಮಾಡಲು ಸಿದ್ಧನಿದ್ದೇನೆ. ಆದರೆ ಈ ರಾಜಕಾರಣದಲ್ಲಿ ಗೌರವಯುತವಾಗಿ ಹೊರಗಡೆ ಹೋಗಬೇಕು ಎಂಬುದು ನನ್ನ ಅಭಿಪ್ರಾಯ.ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು

Leave a Reply

Your email address will not be published. Required fields are marked *