January 14, 2026
11.13

ಅಮೂಲ್ ನಲ್ಲಿ ನಂದಿನಿ ವಿಲೀನ ಆಗುವುದಿಲ್ಲ. ಅದಕ್ಕೆ ನಾವು ಅವಕಾಶ ಮಾಡಿ ಕೊಡಲ್ಲ.ನಂದಿನಿಗಾಗಿ ಎಂತದೇ ಹೋರಾಟ ಮಾಡುವ ಪರಿಸ್ಥಿತಿ ಬಂದರೂ ನಾವು ಸಿದ್ಧರಿದ್ದೇವೆ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಸ್ಪಷ್ಟಪಡಿಸಿದರು.ಮಂಗಳವಾರ ಬೆಳಗಾವಿಯ‌ ಖಾಸಗಿ ಹೊಟೇಲ್ ನಲ್ಲಿ‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಮೂರು ತಿಂಗಳ ಹಿಂದೆ ಮಂಡ್ಯಕ್ಕೆ ಅಮಿತ್ ಷಾ ಅವರು ಆಗಮಿಸಿದ್ದ ವೇಳೆ ಅಮೂಲ್ ಮತ್ತು ನಂದಿನಿ ಎರಡೂ ಜೊತೆಯಾಗಿ ಹೋದರೆ ರೈತರು ಮತ್ತು ಗ್ರಾಹಕರಿಗೆ ಅನುಕೂಲ‌ ಆಗುತ್ತದೆ ಎಂದು ಹೇಳಿದ್ದರು.

ಅದಾದ ಬಳಿಕ ಈಗ ಒಂದು ವಾರದಿಂದ ರಾಜ್ಯದಲ್ಲಿ ಅಮೂಲ್-ನಂದಿನಿ‌ ಗಲಾಟೆ ಶುರುವಾಗಿದೆ.ಅಮೂಲ್ ಸೇರಿ ಯಾವುದೇ ಕಂಪನಿ ಬಂದರೂ ನಂದಿನಿ ಜೊತೆಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ.ನಂದಿನಿ ಹೇಗೆ ಉಳಿಸಬೇಕು, ಬೆಳೆಸಬೇಕು ಎಂಬುದು ಗೊತ್ತಿದೆ. ಹೀಗಾಗಿ ರಾಜ್ಯದಲ್ಲಿ ಅಮೂಲ್ ಮತ್ತು ನಂದಿನಿ ವಿಚಾರವನ್ನು ಇಲ್ಲಿಗೆ ಕೈ ಬಿಡಬೇಕು ಎಂದು ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *