ಬೆಳಗಾವಿ ಪಾಲಿಟಿಕ್ಸ್ ಕಾವೇರುತ್ತಿದ್ದು ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಸಸ್ಪೆನ್ಸ್ ರೀತಿಯಲ್ಲಿ ಬಿಡುಗಡೆ ಮಾಡುತ್ತಿವೆ,ಬೆಳಗಾವಿ ಉತ್ತರದಲ್ಲಿ ಟಿಕೆಟಗಾಗಿ ಮಹಾ ಪೈಪೋಟಿ ನಡೆದಿದ್ದು ಆಮ್ ಆದಮಿ ಪಾರ್ಟಿ ಈಗಾಗಲೆ ಲಿಂಗಾಯತ ಮುಖಂಡನಿಗೆ ಮನೆ ಹಾಕಿದೆ.ಇನ್ನು ಕೆಆರಪಿಪಿ ಪಕ್ಷದ ಗಾಲಿ ಜನಾರ್ಧನ ರೆಡ್ಡಿ ಅವರು ಬೆಳಗಾವಿಯ ಪ್ರವೀಣ ಹಿರೇಮಠ ಅವರ ಕೈ ಹಿಡಿದಿದ್ದು ,ಒಬ್ಬ NRi ಮತ್ತು ಪ್ರತಿಭಾವಂತ ಅಭ್ಯರ್ಥಿ ಹಾಗು ಮರ್ಚೆಂಟ್ ನೇವಿ ಅಧಿಕಾರಿಯವರ ಕೈಗೆ ಬೆಳಗಾವಿ ಉತ್ತರದ ಟಿಕೆಟ್ ನೀಡಿದ್ದಾರೆ.ಪ್ರತಿಭಾವಂತ ಮತ್ತು ವಿದ್ಯಾವಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದ್ದ ಗಾಲಿ ಜನಾರ್ಧನ್ ರೆಡ್ಡಿ ನುಡಿದಂತೆ ನಡೆದಿದ್ದಾರೆ ಎಂದು ಪ್ರವೀಣ ಹಿರೇಮಠ್ ಇಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.