
ಬಿಜೆಪಿ ಟಿಕೆಟ್ ಸಿಗದಿದ್ದರೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ತಾರೆ ಎಂಬ ಚರ್ಚೆ ವಿಚಾರ. ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ. ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ವಿಚಾರ ನನ್ನ ಗಮನಕ್ಕಿಲ್ಲ, ರಾಜ್ಯಮಟ್ಟದಲ್ಲಿ ಈ ಬೆಳವಣಿಗೆ ಆಗ್ತಿದೆ. ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಜಿಲ್ಲಾ ಮಟ್ಟದಲ್ಲಿ ಯಾವುದೇ ಚರ್ಚೆ ಆಗಿಲ್ಲ. ರಾಜ್ಯ ಮಟ್ಟದ ನಾಯಕರ ಜೊತೆಗೆ ಚರ್ಚೆ ಆಗಿದ್ದರೂ ಆಗಿರಬಹುದು, ನನಗೆ ಮಾಹಿತಿ ಇಲ್ಲ, ನನಗೆ ಆ ಬಗ್ಗೆ ಗೊತ್ತಾದ ಬಳಿಕ ಮಾಧ್ಯಮಗಳಿಗೆ ತಿಳಿಸುತ್ತೇನೆ ಎಂದ ಸತೀಶ್ ಜಾರಕೊಹೊಳಿ. ಪಕ್ಷ ಸೇರಿಸಿಕೊಳ್ಳುವಾಗ ನಮ್ಮ ಅಭಿಪ್ರಾಯ ಕೇಳಬಹುದು, ಅವಾಗ ನಾವು ಹೇಳುತ್ತೇವೆ.
ಸವದತ್ತಿ ಕಾಂಗ್ರೆಸ್ ಟಿಕೆಟ್ ವಂಚಿತ ಸೌರಬ್‌ಗೆ ಜೆಡಿಎಸ್ ಗಾಳ ವಿಚಾರ. ಈಗಾಗಲೇ ಟಿಕೆಟ್ ವಂಚಿತರ ಜೊತೆಗೆ ನಾನು ಮಾತುಕತೆ ನಡೆಸಿದ್ದೇನೆ. ಪಕ್ಷದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇನೆ ಎಂದರು.