ನಂದಿನಿ ಬ್ರ್ಯಾಂಡನ್ನ ಅಮೂಲ್ ನಲ್ಲಿ ವಿಲೀನ ಮಾಡುವ ವಿಚಾರ, ನಂದಿನಿ ವಿಲೀನ ವಿರೋಧಿಸಿ ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರ ಪ್ರತಿಭಟನೆ,, ಬೆಳಗಾವಿಯ ಕೆ ಎಂ ಎಫ್ ಸಂಸ್ಕರಣಾ ಘಟಕ ಮುಂದೆ ಕರವೇ ಕಾರ್ಯಕರ್ತರ ಪ್ರತಿಭಟನೆ.
*ಅಮೂಲ್ ಪದಾರ್ಥಗಳ ಖಾಲಿ ಬಾಕ್ಸಗಳಿಗೆ ಬೆಂಕಿ ಇಟ್ಟು ಪ್ರತಿಭಟನೆ *ಅಮೂಲ್ ಪದಾರ್ಥದ ಕೂಲ್ ಡ್ರಿಂಗ್ ನೆಲಕ್ಕೆ ಚಲ್ಲಿ ಆಕ್ರೋಶ ಕರವೇ ನಾರಾಯಣ ಗೌಡ ಬಣದಿಂದ ಪ್ರತಿಭಟನೆ,ಬೆಳಗಾವಿ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡನಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಬೇಡವೆ ಬೇಡ ಅಮೂಲ ಬೇಡ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿರುವ ಕಾರ್ಯಕರ್ತರು, ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಕರವೇ ಕಾರ್ಯಕರ್ತರು.
ನಂದಿನ ಪ್ರಾಡಕ್ಟ್ ನ ಮಜ್ಜಿಗೆ ಹಂಚಿ ಕುಡಿದ ಕರವೇ ಕಾರ್ಯಕರ್ತರು, ನಂದಿನ ಬ್ರಾಂಡ್ ನ ಪೇಢಾ ಹಂಚಿ ತಿಂದು ಪ್ರತಿಭಟಿಸಿದ ಕರವೇ ಕಾರ್ಯಕರ್ತರು. ಅಮೂಲ್ ಪದಾರ್ಥಗಳ ಬಾಕ್ಸ್ ಗಳಿಗೆ ಬೆಂಕಿ ಇಟ್ಟು ಪ್ರತಿಭಟನೆ,
ನಂದಿನಿಯನ್ನು ಯಾವುದೇ ಕಾರಣಕ್ಕೂ ವಿಲೀನ ಮಾಡಲು ಬಿಡಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು