ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರು ಅಮುಲ್ ವಿರುದ್ದ ಪ್ರತಿಭಟನೆ.”ನಂದಿನಿ ನಮ್ಮವಳು, ನಮ್ಮ ಹಾಲು ನಮ್ಮ ಬದುಕು”. ನಂದಿನಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಗುಜರಾತ್ ನ ಅಮುಲ್ ಗೆ ವಿರೋಧ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷಗುಜರಾತ್ ನ ಅಮುಲ್ ಹಾಲು ರಾಜ್ಯಕ್ಕೆ ಎಂಟ್ರಿ ಕೊಡುತ್ತಿದoತೆ . ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಪಕ್ಷ ಇದರ ವಿರುದ್ಧ ನಿಂತು ಪ್ರತಿಭಟನೆ ಮಾಡುತ್ತಿದೆ..ನಂದಿನಿ ಹಾಲಿಗೆ ಸೆಡ್ಡು ಹೊಡೆಯಲು ಅಮುಲ್ ಹಾಲನ್ನು ಇಲ್ಲಿ ಬಿಜೆಪಿ ಸರ್ಕಾರ ಗುಜರಾತ್ ನ ಅಮುಲ್ ಹಾಲಿಗೆ ಸಹಕಾರ ನೀಡಿ ಪರಿಚಯಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಲಾಗುತ್ತಿದೆ.
ಇಂದು ಹಾಸನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿದ್ದರು . ಹಾಸನದಲ್ಲಿ ಇಂದು ನಂದಿನಿ ಪಾರ್ಲರ್‌ಗೆ ಭೇಟಿ ಮಾಡಿ ಹಲವು ಉತ್ಪನ್ನಗಳನ್ನು ಖರೀದಿ ಮಾಡಿದರು.ನಂದಿನಿ ಬಾದಾಮಿ ಹಾಲನ್ನು ಖರೀದಿ ಮಾಡಿ ಡಿ.ಕೆ.ಶಿವಕುಮಾರ್ ಅಲ್ಲೇ ಕುಡಿದರು. ಈ ಮೂಲಕ ನಂದಿನಿ ಉತ್ಪನ್ನಗಳನ್ನು ಬೆಂಬಲಿಸೋದಾಗಿ ಹೇಳಿದರುಕನ್ನಡಿಗರ ಅಸ್ಮಿತೆಯಾದ ನಂದಿನಿ ಹಾಲು ಮತ್ತು ನಂದಿನಿ ಹಾಲಿನ ಉತ್ಪನ್ನಗಳನ್ನು ಬದಿಗೆ ತಳ್ಳಿ ಗುಜರಾತ್ ಮೂಲದ ಅಮುಲ್ ಹಾಲು ಕರ್ನಾಟಕದಲ್ಲಿ ನೆಲೆ ಉರಲು ನೋಡುತ್ತಿದೆ.ಜೆಡಿಎಸ್ ನಾಯಕರು ಹಾಗೂ ಜನಸಾಮಾನ್ಯರ ಒಂದು ವರ್ಗ ಭಾರೀ ವಿರೋಧ ಕೋಡಾ ವ್ಯಕ್ತಪಡಿಸುತ್ತಿದೆ.