ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಸವದತ್ತಿ ಕ್ಷೇತ್ರದಲ್ಲಿ ಅಸಮಾಧಾನ ಬುಗಿಲೆದ್ದಿದೆ.ಕೈ ಟಿಕೆಟ್ ಆಕಾಂಕ್ಷಿ ಯಾಗಿದ್ದ ಸೌರವ್ ಚೋಪ್ರಾ ಅವರು ಸಾಕಷ್ಟು ಅಸಮಾಧಾನವನ್ನ ಹೊರ ಹಾಕಿದ್ದಾರೆ.ಸವದತ್ತಿ ಪಟ್ಟಣದಲ್ಲಿ ಅವರ ತಂದೆ ಆನಂದ ಚೋಪ್ರಾ ಅವರ ಕಾರ್ಯಕರ್ತರು ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಕಾಂಗ್ರೆಸ್ ಪಕ್ಷದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು.ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಅಭಿಮಾನಿಗಳನ್ನ ಉದ್ದೇಶಿಸಿ ಮಾನಾಡಿದ ಸೌರವ್ ಚೋಪ್ರಾ,ಈ ಬಾರಿ ಟಿಕೆಟ್ ಸಿಗುತ್ತೆ ಅಂತ ಬಹಳ ಆಸೆ ಇತ್ತು.
ನಮ್ಮ ತಂದೆಗೆ ಎರಡು ಭಾರಿ ಕಾಂಗ್ರೆಸ್ ಟಿಕೆಟ್ ತಪ್ಪಿದ್ರೂ ಕೂಡ ಈ ಬಾರಿ ಸಿಗುತ್ತೆ ಅಂತ ಭರವಸೆ ಇತ್ತು ಅದು ಹುಸಿಯಾಗಿದ್ದು,ಬಹಳ ನೋವಾಗಿದೆ.ಆದ್ದರಿಂದ ನಾನು ಈ ಬಾರೀ ಚುನಾವಣೆ ನಿಲ್ಲಬಾರದು ಎಂದು ತಿರ್ಮಾಣ ಮಾಡಿದ್ದೆ,ಆದ್ರೆ ನಮ್ಮ ತಂದೆಯ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾನು ಬಹಳ ಅಭಾರಿಯಾಗಿದ್ದು,ನಾನೂ ಕೂಡ ಈ ಬಾರಿ ನಿಮ್ಮ ಆಸೆಯನ್ನ ಹುಸಿ ಮಾಡುವುದಿಲ್ಲಾ.
ಈ ಬಾರೀ ನಾನು ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ.ಅಲ್ಲದೇ ಈ ಬಾರಿ ಗೆದ್ದು ಕಾಂಗ್ರೆಸ್ ಪಕ್ಷಕ್ಕೆ ನಾನು ಎನು ಅನ್ನೋದನ್ನ ತೋರಿಸುತ್ತೆ ಎಂದು ಸವಾಲು ಹಾಕಿದ್ರು.ಅವರು ಸ್ಪರ್ಧೆ ಮಾಡುತ್ತೇನೆ ಎಂದ ಕೂಡಲೇ ಕಾರ್ಯಕರ್ತರ ,ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿತ್ತು.ಅವರ ತಾಯಿಯ ಕಣ್ಣಲ್ಲಿ ನೀರು ತುಂಬಿ ಬಂದಿದ್ದು, ಒಂದು ರೀತಿಯಲ್ಲಿ ಎಲ್ಲರ ಮನಕಲಕುವಂತಿತ್ತು…
ಕಾಂಗ್ರೆಸ್ ಬಂಡಾಯ ಅಭ್ಯರ್ಥಿ