ಇದರ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ತಾಲೂಕ ಕಾನೂನು ಸೇವಾ ಸಮಿತಿ ರಾಮದುರ್ಗ ವತಿಯಿಂದ
ಪೂರ್ವಭಾವಿ ಸಭೆ ಜರುಗಿತು.
ಸಭೆಯಲ್ಲಿ ಹಾಜರಿದ್ದ ಹಿರಿಯ ದಿವಾಣಿ ನ್ಯಾಯಾಧೀಶರು ಮತ್ತು JMFC. ಕಾನೂನು ಸೇವಾ ಸಮಿತಿ, ರಾಮದುರ್ಗದ ಅಧ್ಯಕ್ಷರಾದ ಶ್ರೀ ಹನುಮಂತ ಜಿ ಎಚ್ ಹಾಗೂ ದಿವಾಣಿ ನ್ಯಾಯಾಧೀಶರು ಮತ್ತು JMFC ಹಾಗೂ ಸದಸ್ಯ ಕಾರ್ಯದರ್ಶಿಗಳು ಕಾನೂನು ಸೇವಾ ಸಮಿತಿ ರಾಮದುರ್ಗ ಶ್ರೀಮತಿ ಸುಕಿತಾ ಹದ್ಲಿ ಮತ್ತು ನ್ಯಾಯವಾದಿಗಳ ಸಂಘ ರಾಮದುರ್ಗ ಅಧ್ಯಕ್ಷರಾದ ಶ್ರೀ ಆರ್. ಜಿ ವಜ್ರಮಟ್ಟಿ ಇವರು
ರಾಷ್ಟ್ರೀಯ ಲೋಕ ಅದಾಲತ ಕುರಿತು ವಿವರಿಸಿದರು.
ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಪ್ರಯೋಜನ ಪಡೆಯವವರ ಕುರಿತು ಮೊದಲೇ ಮಾಹಿತ ಸಂಗ್ರಹಿಸಿ ನೀಡುವಂತೆ ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸರಿಯಾದ ತಿಳುವಳಿಕೆಯನ್ನು ನೀಡಿ ಲೋಕ ಅದಾಲತ್ ಕಾರ್ಯಕ್ರಮವನ್ನು ಅತ್ಯಂತ ಯಶಸ್ವೀಗೊಳಿಸುವತ್ತ ಕ್ರಮ ಕೈಗೊಳ್ಳಬೇಕು ಎಂದೂ ಕೋರಲಾಯಿತು.
ಬ್ಯಾಂಕ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಪ್ರಕರಣಗಳು, ಸಿವಿಲ್ ವ್ಯಾಜ್ಯಗಳು, ಜನನ-ಮರಣ ನೋಂದಣಿಗೆ ಸಂಬಂಧಪಟ್ಟ ಪ್ರಕರಣಗಳು ಇತ್ಯಾದಿಗಳನ್ನು ಹೆಚ್ಚು ಹೆಚ್ಚು ಲೋಕ ಅದಾಲತ್‍ನಲ್ಲಿ ಇಡುವುದಕ್ಕೆ ಕಕ್ಷಿದಾರರಿಗೆ ಮನವರಿಕೆ ಮಾಡಿಕೊಡುವಲ್ಲಿ ಸರಿಯಾದ ಮಾರ್ಗದರ್ಶನ ನೀಡುವಂತೆಯೂ ವಕೀಲರುಗಳಿಗೆ ತಿಳಿಸಲಾಯಿತು.
ಸಭೆಯಲ್ಲಿ ರಾಮದುರ್ಗ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ, ಕಟ್ಟಡ ಕಾರ್ಮಿಕ ಇಲಾಖೆ.ರಾಷ್ಟ್ರಿಯ ಬ್ಯಾಂಕ ಮತ್ತು ಸಹಕಾರಿ ಬ್ಯಾಂಕ. ಪೋಲಿಸ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ರಾಷ್ಟ್ರೀಯ ಲೋಕ ಅದಾಲತ ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.
ದಿನಾಂಕ 11.02.2023 ರಂದು ಜರಗುವ ” ರಾಷ್ಟ್ರೀಯ ಲೋಕಅದಾಲತ ” ನಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಪ್ರಾಧಿಕಾರ ಹಾಗೂ ತಾಲೂಕ ಕಾನೂನು ಸೇವಾ ಸಮಿತಿಗಳನ್ನು ಅರ್ಜಿ ಸಲ್ಲಿಸುವ ಮೂಲಕ ಹಾಗೂ ಹೆಚ್ಚಿನ ಮಾಹಿತಿಗಾಗಿ ಕೇಳಕಂಡ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿರಿ ಎಂದು ಕೋರಲಾಗಿದೆ.
ತಾಲೂಕ ಕಾನೂನು ಸೇವಾ ಸಮಿತಿ ರಾಮದುರ್ಗ.
ಸಂಪರ್ಕ ಮಾಡಿ
* +91 8050644574
* +91 829679278