40 ಕೋಟಿ ಖರ್ಚು ಮಾಡಿದ್ದಾರೆ. ನನ್ನ ಹಾಳು ಮಾಡಲು. ಸಿಡಿ ಕೇಸ್ ಅನ್ನು ಸಿಬಿಐ ತನಿಖೆ ಆಗಬೇಕು. ದೇವನಹಳ್ಳಿ ಮನೆಯಲ್ಲಿ ದಾಳಿ ಸಂದರ್ಭದಲ್ಲಿ ರೆಡ್ ಮಾಡಿದ ಅಧಿಕಾರಿಯ ಸಿಡಿಯೂ ಸಿಕ್ಕಿದೆ. ದೆಹಲಿಗೆ ಹೋಗಿ ಅಮಿಷ್ ಶಾ ಭೇಟಿಯಾಗಿ ಮನವಿ ಮಾಡುತ್ತೇನೆ. ಸಾಕಷ್ಟು ಜನರನ್ನು ಬ್ಲ್ಯಾಕ್ ಮೆಲ್ ಮಾಡಲು ಸಿದ್ದಮಾಡಿಕೊಂಡಿದ್ದಾನೆ ಎಂದು ರಮೇಶ ಜಾರಕಿಹೊಳಿ ಹೇಳಿದರು.
ಸಂತೋಷ ಪಾಟೀಲ್ ಆತ್ಮಹತ್ಯೆ ಕೇಸ್ ಸಹ ಸಿಬಿಐ ವಹಿಸಬೇಕು. ಚಿಕ್ಕಮಗಳೂರು ಒಂದೇ ರೂಮನಲ್ಲಿ ಇದ್ರು, ಉಡುಪಿಯಲ್ಲಿ ಬೇರೆ ರೂಮ ಮಾತನಾಡಿದ್ರು. ನನ್ನ ಬಗ್ಗೆ ಡಿಕೆಶಿಗೆ ಹೆದರಿಕೆ ಇದೆ. ಸಿಬಿಐ ಕೊಡಿಸ್ತಿನಿ ಬಿಡಲ್ಲ. ನಾನು ಮಂತ್ರಿ ಬೇಡ ಎಂದು ಹೇಳಿದ್ದೇನೆ. ಮೂರು ತಿಂಗಳು ಮಂತ್ರಿ ಆಗಿ ಅರ್ಥ ಇಲ್ಲ. ಚುನಾವಣೆ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮಂತ್ರಿ ಆಗುತ್ತೇನೆ ಎಂದರು.