ಹಲವು ವರ್ಷಗಳಿಂದ ಪಾಶ್ಚಾಪುರದ ಬೇಪಾರಿ ಸಮುದಾಯದಲ್ಲಿ ವೈಮನಸ್ಸು ಉಂಟಾಗಿ, ತಮ್ಮ ಸಮುದಾಯದ ಬಾಶಾ ಹುಸೇನಸಾಬ ಬೇಪಾರಿ ಹಾಗೂ ಕುಟುಂಬಸ್ಥರನ್ನು ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಿ, ಊರಿನಿಂದ ಹೊರಹಾಕಲಾಗಿತ್ತು, ಅರ್ಜಿದಾರರಾದ ನಜೀರ್ ಹುಸೇನಸಾಬ ಬೇಪಾರಿ ಮತ್ತು ಅವರ ಕುಟುಂಬ ಹಿಡಕಲ್ ಡ್ಯಾಮ್‌ನಲ್ಲಿ ವಾಸವಾಗಿದ್ದರು, ಕೊನೆಗೆ ಧಾರವಾಡ ನ್ಯಾಯಪೀಠದ ವತಿಯಿಂದ ಏಳು ವರ್ಷಗಳ ನಂತರ ಇವರಿಗೆ ಜಸ್ಟಿಸ್ ಸಂಜಯ ಗೌಡ ಇವರು ಆದೇಶ ಹೊರಡಿಸಿ ಶಾಶ್ವತ ಪರಿಹಾರ ನೀಡುವುದರ ಮೂಲಕ ಪಾಶ್ಚಾಪುರದ ಅವರ ಮನೆಗೆ ಮರಳಲು ಪೊಲೀಸ್ ರಕ್ಷಣೆಯನ್ನು ನೀಡಿದ್ದಾರೆ.
ಶಾಂತಿಯುತ ಜೀವನ ನಡೆಸಲು ಅವರಿಗೆ ಹಾಗೂ ಅವರು ಮಾಡುವ ಉದ್ಯೋಗಕ್ಕೆ ಯಾವುದೇ ಅಡತಡೆ ಮಾಡದ ರೀತಿಯಲ್ಲಿ ನಡೆದುಕೊಳ್ಳಲು ಅವರ ಸಮುದಾಯದ ಮುಖಂಡರಿಗೆ ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಪಾಶ್ಚಾಪುರ ಪೊಲೀಸರು ನ್ಯಾಯಾಲಯದ ಆದೇಶದಂತೆ ಪೊಲೀಸ ಕಾವಲಿನಲ್ಲಿ ಬೇಪಾರಿ ಕುಟುಂಬವನ್ನು ಅವರ ನಿವಾಸಕ್ಕೆ ಮರಳಿಸಿ, ನ್ಯಾಯಾಲಯದ ಕಾನೂನು ನಿಯಮಗಳನ್ನು ಚಾಚು ತಪ್ಪದೇ ಪಾಲಿಸುವಂತೆ ಬಹಿಷ್ಕಾರ ನೀಡಿದ ಸಮುದಾಯದ ಮುಖಂಡರಿಗೂ ಹಾಗೂ ಬೇಪಾರಿ ಕುಟುಂಬಸ್ಥರಿಗೂ ಎಚ್ಚರಿಗೆ ನೀಡಿದ್ದಾರೆ. ಕಾನೂನು ನಿಯಮ ಉಲಂಘಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.
ಅರ್ಜಿದಾರ ನಜಿರ್ ಬೇಪಾರಿ ಇವರ ಪರವಾಗಿ ಹೈ ಕೋರ್ಟ್ ಅಲ್ಲಿ ವಾದ ಮಂಡಿಸಿದ ನ್ಯಾಯವಾದಿ ಅನ್ವರ್ ಅಲಿ ನದಾಫ್ ಇವರು ಮಾಧ್ಯಮದೊಂದಿಗೆ ಮಾತನಾಡಿ ಹೈ ಕೋರ್ಟ್ ಆದೇಶದ ಬಗ್ಗೆ ತಿಳಿಸಿದರು.