ಕಾರ್ಮಿಕರ ನಿರ್ಲಕ್ಷ್ಯವೋ ಅಥವಾ ಬೇರೆ ಯಾವುದೇ ಕಾರಣವೋ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಸದ್ಯಕ್ಕೆ ಹಾನಿಗೊಳಗಾದ ಚೆನ್ನಮ್ಮನ ಖಡ್ಗದ ಕೈ ಭಾಗವನ್ನು ನುರಿತ ಸಿಬ್ಬಂದಿಗಳಿಂದ ಸರಿಪಡಿಸುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಕಿತ್ತೂರು ಉತ್ಸವದ ಸಿದ್ಧತೆಗಳು ಜೋರಾಗಿರುವಾಗಲೇ ಈ ರೀತಿಯ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಮತ್ತು ಕನ್ನಡಪರ ಸಂಘಟನೆಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಬೆಳಗಾವಿ: ಕಿತ್ತೂರು ಉತ್ಸವದ ಹೊತ್ತಲ್ಲೇ ವೀರರಾಣಿ ಚೆನ್ನಮ್ಮನ ಪುತ್ಥಳಿಗೆ ಹಾನಿ, ಕೈ ಭಾಗ ಕಟ್!
ಕಿತ್ತೂರು ಉತ್ಸವದ ಹೊತ್ತಲ್ಲೇ ಬೆಳಗಾವಿಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನ ಪುತ್ಥಳಿಗೆ ಹಾನಿಯಾಗಿದ್ದು, ಖಡ್ಗ ಹಿಡಿದಿದ್ದ ಕೈ ಭಾಗ ಮುರಿದಿದೆ. ಕೂಲಿ ಕಾರ್ಮಿಕರ ಅಚಾತುರ್ಯ ಶಂಕೆ.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.