Home / ಬೆಳಗಾವಿ / ಬೆಳಗಾವಿ ಕೆಫೆ ಗಲಾಟೆ ಪ್ರಕರಣಕ್ಕೆ ಬಿಗ್ ಟ್ವಿಸ...

ಬೆಳಗಾವಿ ಕೆಫೆ ಗಲಾಟೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮುಸುಕುದಾರಿಗಳ ದಾಳಿಗೂ ಮುನ್ನವೇ ನಡೆದಿತ್ತು ದಾದಾಗಿರಿ!

B
By B News Desk
October 19, 2026 0 comments Edit Article

ಬೆಳಗಾವಿ ಕೆಫೆ ಗಲಾಟೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮುಸುಕುದಾರಿಗಳ ದಾಳಿಗೂ ಮುನ್ನ ಕೆಫೆ ಮಾಲೀಕ ಕೈಫ್ ಗ್ಯಾಂಗ್‌ನಿಂದ ದಾದಾಗಿರಿ ನಡೆದಿರುವುದು ಬಯಲಾಗಿದೆ.

ಈ ಲೇಖನವನ್ನು ಆಲಿಸಿ TTS AI

2 ನಿಮಿಷಗಳ ಓದು • 198 ಪದಗಳು (ಸಿದ್ಧವಾಗಿದೆ)
ಅಕ್ಷರ ಗಾತ್ರ:
ವೇಗ:
ಬೆಳಗಾವಿ ಕೆಫೆ ಗಲಾಟೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮುಸುಕುದಾರಿಗಳ ದಾಳಿಗೂ ಮುನ್ನವೇ ನಡೆದಿತ್ತು ದಾದಾಗಿರಿ!
ಬೆಳಗಾವಿ: ನಗರದಲ್ಲಿ ತಲ್ವಾರ್ ಹಿಡಿದು ಕೆಫೆಗೆ ನುಗ್ಗಿ ಗಲಾಟೆ ನಡೆಸಿದ ಸಂಚಲನಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸತ್ಯಗಳು ಹೊರಬಂದಿವೆ. ಕೆಫೆ ಮಾಲೀಕನ ಮೇಲೆ ಮುಸುಕುದಾರಿಗಳು ದಾಳಿ ನಡೆಸುವುದಕ್ಕೂ ಮುನ್ನವೇ, ಅದೇ ಕೆಫೆ ಮಾಲೀಕ ಹಾಗೂ ಆತನ ಗ್ಯಾಂಗ್ ಅರ್ಮಾನ್ ನದಾಫ್ ಎಂಬಾತನ ಮನೆ ಮೇಲೆ ತಲ್ವಾರ್ ಹಿಡಿದು ದಾಳಿ ನಡೆಸಿ ದಾಂಧಲೆ ಎಸಗಿರುವುದು ತನಿಖೆಯಿಂದ ಬಯಲಾಗಿದೆ. ಅಕ್ಟೋಬರ್ 9ರಂದು ಸಂಗಮೇಶ್ವರ ನಗರದಲ್ಲಿರುವ ಅರ್ಮಾನ್ ಮನೆಗೆ ನುಗ್ಗಿದ್ದ ಕೆಫೆ ಮಾಲೀಕ ಕೈಫ್ ಶೇರಖಾನ್ ಹಾಗೂ ಆತನ ಗ್ಯಾಂಗ್, ಅರ್ಮಾನ್ ಹಾಗೂ ಆತನ ತಂದೆಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಹಾಕಿತ್ತು. ಈ ಗಂಭೀರ ಘಟನೆಯ ಕುರಿತು ಎಪಿಎಂಸಿ ಪೊಲೀಸ್ ಠಾಣೆಗೆ ಸಂತ್ರಸ್ತೆಯು ದೂರು ನೀಡಿದ್ದರೂ ಸಹ, ಸ್ಥಳೀಯ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರ ನಿರ್ಲಕ್ಷ್ಯವೇ ಅನಾಹುತಕ್ಕೆ ಕಾರಣ - ಕುಟುಂಬಸ್ಥರ ಆಕ್ರೋಶ: ಪೊಲೀಸರು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡಿದ್ದರೆ ಅಕ್ಟೋಬರ್ 15ರಂದು ರಾತ್ರಿ ಕೆಫೆಗೆ ನುಗ್ಗಿ ಕೈಫ್ ಮೇಲೆ ನಡೆದ ಮುಸುಕುದಾರಿಗಳ ಹಲ್ಲೆ ಪ್ರಕರಣ ನಡೆಯುತ್ತಿರಲಿಲ್ಲ ಎಂದು ಅರ್ಮಾನ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಾವು ಮೊದಲು ದೂರು ನೀಡಿದಾಗ ಪೊಲೀಸರು ಸ್ಪಂದಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಈಗ ನಮ್ಮ ಮಗ ಘಟನೆಯಲ್ಲಿ ಇಲ್ಲದಿದ್ದರೂ ಆತನನ್ನು ಸುಮ್ಮನೆ ಸಿಕ್ಕಿಹಾಕಿಸಿ ಬಂಧಿಸಿದ್ದಾರೆ"
ಎಂದು ಅರ್ಮಾನ್ ತಾಯಿ ಕಣ್ಣೀರುಹಾಕಿದ್ದಾರೆ. ಪಾಲಿಕೆ ಸದಸ್ಯೆ ಪುತ್ರನ ಕುಮ್ಮಕ್ಕು ಆರೋಪ: ಸ್ಥಳೀಯ ಪಾಲಿಕೆ ಸದಸ್ಯೆ ಪುತ್ರ ಇಮ್ರಾನ್ ಪತೇಖಾನ್ ಕುಮ್ಮಕ್ಕಿನಿಂದಲೇ ತಮ್ಮ ಮಗನ ಮೇಲೆ ಈ ಅನ್ಯಾಯದ ಹಲ್ಲೆ ಹಾಗೂ ಬಂಧನವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಹಕ್ಕುತ್ಯಾಗ
ಈ ಲೇಖನವು AI ಬಳಸಿ ರಚಿತವಾಗಿರಬಹುದು, ಸಂಪಾದಿಸಿರಬಹುದು ಅಥವಾ ಅನುವಾದಿಸಿರಬಹುದು ಹಾಗೂ ಇದರಲ್ಲಿ ವಾಸ್ತವಾಂಶ, ಭಾಷಾಂತರ ಅಥವಾ ಸಾಂದರ್ಭಿಕ ದೋಷಗಳಿರಬಹುದು. ಪ್ರಮುಖ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ದೃಢಪಡಿಸಿಕೊಳ್ಳಲು ಓದುಗರಿಗೆ ಸಲಹೆ ನೀಡಲಾಗುತ್ತದೆ. AI-ನೆರವಿನ ವಿಷಯದಿಂದ ಉಂಟಾಗುವ ಯಾವುದೇ ತಪ್ಪುಗಳಿಗೆ ಪ್ರಕಾಶಕರು ಜವಾಬ್ದಾರರಾಗಿರುವುದಿಲ್ಲ. ಕಾನೂನು ಹಕ್ಕುತ್ಯಾಗ
TAGS: ಬೆಳಗಾವಿ ನ್ಯೂಸ್ ಕೆಫೆ ಗಲಾಟೆ ಬೆಳಗಾವಿ ಪೊಲೀಸರು ತಲ್ವಾರ್ ದಾಳಿ Belagavi News APMC Police Station
SHARE THIS ARTICLE
B

B News Desk

Senior Staff Journalist and Correspondent at B News. Covering breaking global stories, contemporary culture, and modern innovations.

B News Live Search

Search Articles

Type any keyword to instantly search stories across categories.
Send News