ಬೆಳಗಾವಿ ಗಡಿವಿವಾದ ವಿಚಾರಣೆಗೆ ದಿನಗಣನೆ ಶುರುವಾಗಿದ್ದು, ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಅಂತಿಮ ಹಂತದಲ್ಲಿರುವ ಸಂಧರ್ಭದಲ್ಲಿ ಮಹಾರಾಷ್ಟ್ರದಲ್ಲಿ ಮರಾಠಿ ಭಾಷಿಕ ಪುಂಡರು ಕರ್ನಾಟಕದ ಬಸ್ಸಿಗೆ ಮಸಿ ಬಳಿದ ಘಟನೆ ಬೆಳಕಿಗೆ ಬಂದಿದೆ. ಇವರು ತಮ್ಮ ನೀಚ ಬುದ್ದಿಯನ್ನು ಮುಂಡುವರಿಸುತ್ತಾ ಈ ಕೃತ್ಯವನ್ನು ವೆಸಗಿದ್ದಾರೆ. ರಾಜಕೀಯ ಲಾಭಕ್ಕಾಗಿ ಇವರು ಎರಡು ಭಾಷಿಕರ ನಡುವೆ ವಿಷ ಬೀಜವನ್ನು ಬಿತ್ತುವುದು ಹೊಸದೆನು ಅಲ್ಲ.
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮದ ಬಳಿ, ಕೆಎಸ್‌ಆರ್‌ಟಿಸಿ ಬಸ್‌ಗೆ ಮಸಿ ಬಳಿದು ಪುಂಡಾಟಿಕೆ ಮೆರೆದಿದ್ದಾರೆ. ನಿಪ್ಪಾಣಿ ಔರಂಗಾಬಾದ ಮಧ್ಯೆ ಸಂಚರಿಸುವ ನಿಪ್ಪಾಣಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ಗೆ ಮಸಿ ಬಳೆಯಲಾಗಿದೆ. ಅಖಿಲ ಭಾರತೀಯ ಮರಾಠಾ ಸಂಘದ ಕಾರ್ಯಕರ್ತರು ಬಸ್ಸಿಗೆ ಮಸಿ ಬಳೆದಿದ್ದಾರೆ.
ಜತ್ತ ತಾಲೂಕಿನ 40 ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕೆಂದು ಠರಾವು ಹೊರಡಿಸಿರುವ ಹಿನ್ನಲೆಯಲ್ಲಿ, ಸಿಎಂ ಬಸವರಾಜ ಬೊಮ್ಮಾಯಿ ಯವರ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತ ಮರಾಠಿ ಭಾಷಿಕ ಪುಂಡರು, ಮಹಾರಾಷ್ಟ್ರ ನಮ್ಮ ಹಕ್ಕಿಂದು ಯಾರಪ್ಪಂದಲ್ಲ ಎಂಬ ಘೋಷಣೆ ಯೊಂದಿಗೆ. ಬೆಳಗಾವಿ, ನಿಪ್ಪಾಣಿ, ಖಾನಾಪುರ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕೆಂದೂ ಘೋಷಣೆ ಕೂಗಿರುವುದು ತಿಳಿದು ಬಂದಿದೆ.