December 7, 2024

ಮೆಟ್ರೋ, DRDO, IISC ಬ್ಲಾಸ್ಟ್ ಮಾಡ್ತೀನೆಂದು ಯುವಕ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದು ಅಕಸ್ಮಾತ್ ನನ್ನನ್ನು ಬಂಧಿಸಿದರೆ ಡಿಬಾಸ್ ದರ್ಶನ್ ಪಕ್ಕದ ಸೆಲ್​ಗೆ ಹಾಕಿ ಎಂದು ಮನವಿ ಮಾಡಿ ಯುವಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ಗಾಂಧಿನಗರದ ಪೃಥ್ವಿರಾಜ್ ಎಂಬ ಯುವಕನ ಈ ವಿಡಿಯೋ ಸದ್ಯ ಭಾರೀ ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುವ ಪೃಥ್ವಿರಾಜ್ ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಗೊಂದಲಕ್ಕೊಳಗಾದ ಪೃಥ್ವಿರಾಜ್ ತಾಯಿ 4 ದಿನದ ಹಿಂದೆ ಚಳ್ಳಕೆರೆ ಠಾಣೆಗೆ ಹೋಗಿ ನನ್ನ ಪುತ್ರ ಪೃಥ್ವಿರಾಜ್ ನಾಪತ್ತೆ ಆಗಿದ್ದಾನೆ, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ದೂರು ನೀಡಿದ್ದರು. ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ದೂರು ಸ್ವೀಕರಿಸದೆ ವಾಪಸ್ ಕಳಿಸಿದ್ದರು.

ಬಳಿಕ ಕೆಲ ದಿನಗಳು ಆದ ನಂತರ ಪೃಥ್ವಿರಾಜ್ ವಾಪಸ್ ತಾಯಿ ಮನೆಗೆ ಬಂದಿದ್ದು ತಾಯಿ ತನ್ನ ಮಗನ ಬಳಿ ಪೊಲೀಸ್ ಠಾಣೆಯಲ್ಲಿ ಆದ ವಿಚಾರವನ್ನು ತಿಳಿಸಿದ್ದಾರೆ. ತನ್ನ ತಾಯಿಯ ದೂರು ಪಡೆಯದೆ ವಾಪಸ್ ಕಳಿಸಿದ್ದಕ್ಕೆ ಕೆಂಡವಾಗಿದ್ದ ಪೃಥ್ವಿರಾಜ್, ಚಳ್ಳಕೆರೆ ಠಾಣೆ ಬಳಿಗೆ ತೆರಳಿ ವಿಡಿಯೋ ಮಾಡಿದ್ದಾನೆ. ದೂರು ಯಾಕೆ ಸ್ವೀಕರಿಸಿಲ್ಲ ಎಂದು ಪ್ರಶ್ನಿಸಿದ್ದಾನೆ. ಪೊಲೀಸರು ಮೊಬೈಲ್ ಆಫ್ ಮಾಡು ಎಂದರೂ ಮಾತು ಕೇಳಿರಲಿಲ್ಲ. ಕೊನೆಗೆ ಪೃಥ್ವಿರಾಜ್ ನನ್ನು ಹಿಡಿದು ಮೊಬೈಲ್ ಕಸಿದುಕೊಂಡು ಪೊಲೀಸರು ಬುದ್ದಿ ಹೇಳಿದ್ದರು.

Leave a Reply

Your email address will not be published. Required fields are marked *