
ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಗ್ಯಾರೇಜ್‌ಗಳಲ್ಲಿನ ಕಬ್ಬಿಣದ ವಸ್ತುಗಳನ್ನ ದೋಚಿದ್ದ ಮೂವರನ್ನ ಹೆಡೆಮುರಿ ಕಟ್ಟುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಉನಕಲ ಗ್ರಾಮದವರಾಗಿದ್ದಾರೆ. ಕರಿಯಪ್ಪ ಚಿನ್ನಪ್ಪ ತಳವಾರ, ಸುನೀಲ ಜಂಬಣ್ಣ ಕಟ್ಟಿಮನಿ ಹಾಗೂ ಸಂಗಮೇಶ ಕರಿಗೌಡ ಬಬಲೇಶ್ವರ ಎಂದು ಗುರುತಿಸಲಾಗಿದ್ದು ಇನ್ನು ಬಂಧಿತರಿಂದ ಒಟ್ಟು 139000 ಮೌಲ್ಯದ ಕಳುವಾದ ಕಬ್ಬಿಣದ ವಸ್ತುಗಳು ಹಾಗೂ ಅದಕ್ಕೆ ಉಪಯೋಗಿಸಿದ ವಾಹನ ವಶಪಡಿಸಿಕೊಳ್ಳಲಾಗಿದೆ.
ಗ್ರಾಮೀಣ ಠಾಣೆಯ ಇನ್ಸಪೆಕ್ಟರ ಆದ ಎಂ.ಆರ್.ಚೆನ್ನಣ್ಣವರ ನೇತೃತ್ವದಲ್ಲಿ ಪಿ ಎಸ್ ಐ ಗಳಾದ ವ್ಹಿ ಎಸ್ ಬೆಳಗಾಂವಕರ, ಸಚಿನ ಆಲಮೇಲಕರ, ಸಿಬ್ಬಂದಿಗಳಾದ ಎ ಎಸ್ ಐ ಎನ್.ಐ.ಹಿರೇಹೋಳಿ, ಎ ಎಸ್ ಐ ಎನ್ ಎಂ ಹೊನ್ನಪ್ಪನ್ನವರ, ಸಿ.ಬಿ.ಜನಗಣ್ಣವರ, ಎಚ್ ಎಲ್ ಮಲ್ಲಿಗವಾಡ, ಎ ಎ ಕಾಕರ, ಮಾಂತೇಶ ಮದ್ದಿನ, ಚನ್ನಪ್ಪ ಬಳ್ಳೊಳ್ಳಿ, ವಿಶ್ವನಾಥ ಬಡಿಗೇರ, ನಾಗಪ್ಪ ಸಂಶಿ, ನಾಗರಾಜ ಮಾಣಿಕ, ಪ್ರೇಮನಾಥ ರಾಠೋಡ, ಉಮೇಶ ವಡ್ಡರ ಈ ಒಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.