October 15, 2025
Screenshot 2024-07-19 121747

ಬೆಂಗಳೂರು: ಸದನ ಬೇಗ ಆರಂಭವಾಗುವ ನಿಟ್ಟಿನಲ್ಲಿ ಹಾಗೂ  ವಿಧಾನಮಂಡಲ ಅಧಿವೇಶನಕ್ಕೆ ಆಗಮಿಸುವ ಶಾಸಕರಿಗೆ ಉತ್ಸಾಹ ತುಂಬುವ ನಿಟ್ಟಿನಲ್ಲಿ ಉಚಿತ ಊಟ, ತಿಂಡಿ ವ್ಯವಸ್ಥೆಯನ್ನು ಸ್ಪೀಕರ್ ಯು.ಟಿ ಖಾದರ್ ಮಾಡಿದ್ದಾರೆ. ಅಷ್ಟೇ ಸಾಲದು ಎಂಬಂತೆ ಊಟ ಆದ ಬಳಿಕ ಮಧ್ಯಾಹ್ನದ ಕಿರು ನಿದ್ರೆಗೆ ವಿಲಾಸಿ ಖುರ್ಚಿಯ ವ್ಯವಸ್ಥೆ ಮಾಡಲಾಗಿದೆ.

ಸದ್ಯ ಪ್ರಾಯೋಗಿಕವಾಗಿ ಒಂದು ಕುರ್ಚಿಯನ್ನು ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಕುಳಿತುಕೊಳ್ಳಲು ಹಾಗೂ ಮಲಗಲು ಅವಕಾಶ ಆಗುವಂತಹ ಐಶಾರಾಮಿ ಕುರ್ಚಿಯನ್ನು ಮೊಗಸಾಲೆಯಲ್ಲಿ ಹಾಕಲು ಸ್ಪೀಕರ್ ಯು.ಟಿ ಖಾದರ್ ನಿರ್ಧಾರ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ಹೆಚ್ಚಳ ಮಾಡಲು ಸ್ಪೀಕರ್ ಖಾದರ್ ಹಲವು ಪ್ರಯೋಗಗಳನ್ನು ನಡೆಸಿದ್ದಾರೆ. ಸದನ ಬೇಗ ಆರಂಭವಾಗುವ ನಿಟ್ಟಿನಲ್ಲಿ ಶಾಸಕರಿಗೆ ಉಚಿತ ತಿಂಡಿ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮಧ್ಯಾಹ್ನದ ಊಟಕ್ಕೆ ಹೊರಗಡೆ ಹೋಗುವ ಅಗತ್ಯವಿಲ್ಲ. ಇದರಿಂದಾಗಿ ಸದನದಲ್ಲಿ ಹೆಚ್ಚು ಸಮಯ ಚರ್ಚೆ ನಡೆಸಲು ಅವಕಾಶ ಆಗಲಿದೆ ಎಂಬುದು ಉದ್ದೇಶವಾಗಿದೆ.

Leave a Reply

Your email address will not be published. Required fields are marked *