October 18, 2024

ಮುಂಬರುವ ಕೇಂದ್ರ ಬಜೆಟ್​ನಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಹೆಚ್ಚಿನ ಹಣ ಹಂಚಿಕೆ ಆಗಬಹುದು ಎನ್ನಲಾಗುತ್ತಿದೆ. ವರದಿಗಳ ಪ್ರಕಾರ ಶೇ. 30ರಷ್ಟು ಹೆಚ್ಚು ಅಲೋಕೇಶನ್ ಆಗಬಹುದು. ಮಧ್ಯಂತರ ಬಜೆಟ್​ನಲ್ಲಿ ಈ ಯೋಜನೆಗೆ 60,000 ರೂ ಹಣ ಘೋಷಿಸಲಾಗಿತ್ತು. ಅದನ್ನು 80,000 ಕೋಟಿ ರೂಗೆ ಹೆಚ್ಚಿಸಬಹುದು ಎನ್ನಲಾಗುತ್ತಿದೆ.

ಹೌದು, ದೇಶದ ರೈತರಿಗೆ ಮೀಸಲಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೀಡಲಾಗುವ ಹಣವನ್ನು ಹೆಚ್ಚಿಸುವ ಕುರಿತು ಸಾಧ್ಯತೆ ದಟ್ಟವಾಗಿದೆ. 2024-25ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಾರ್ಷಿಕ ₹ 2,000 ರಷ್ಟು ಸಹಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಈ ಹೆಚ್ಚಳ ಘೋಷಣೆಯಾದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನ ಪಡೆಯುವ ಪ್ರತಿ ಕುಟುಂಬಕ್ಕೆ ₹ 8,000 ರೂ. ದೊರೆಯಲಿದೆ. ಈವರೆಗೆ ಯೋಜನೆಯಡಿ ರೈತರಿಗೆ ಮೂರು ನಾಲ್ಕು ತಿಂಗಳ ಕಂತುಗಳ ಮೂಲಕ ವಾರ್ಷಿಕ ₹ 6,000 ಆರ್ಥಿಕ ನೆರವು ನೀಡಲಾಗುತ್ತಿತ್ತು. ಮಧ್ಯಂತರ ಬಜೆಟ್ನ ₹ 60,000 ಕೋಟಿ ಹಂಚಿಕೆಯಿಂದ ಬೊಕ್ಕಸಕ್ಕೆ ಹೆಚ್ಚುವರಿ ₹ 20,000 ಕೋಟಿ ವೆಚ್ಚವಾಗುವ ನಿರೀಕ್ಷೆಯಿದೆ. ಕೃಷಿ ಮುಖಂಡರು, ಹಣಕಾಸು ಸಚಿವರೊಂದಿಗೆ ತಮ್ಮ ಬಜೆಟ್ ಪೂರ್ವ ಸಭೆಯಲ್ಲಿ ಕಂತು ಮೊತ್ತವನ್ನು ₹ 6,000 ರಿಂದ ವರ್ಷಕ್ಕೆ ₹ 8,000 ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಈ ಬಾರಿಯ ಬಜೆಟ್​ನಲ್ಲಿ ಯುವಜನರು, ಮಹಿಳೆಯರು, ರೈತರು ಮತ್ತು ಗ್ರಾಮೀಣಭಾಗ ಈ ನಾಲ್ಕು ಅಂಶಗಳಿಗೆ ಹೆಚ್ಚಿನ ಒತ್ತು ಕೊಡಬಹುದು. ಹೀಗಾಗಿ, ಪಿಎಂ ಕಿಸಾನ್ ಯೋಜನೆಗೆ ಹಣ ಹಂಚಿಕೆ ಹೆಚ್ಚಿಸುವ ಸಾಧ್ಯತೆ ಗಟ್ಟಿಯಾಗಿದೆ.

Leave a Reply

Your email address will not be published. Required fields are marked *