ಹುಬ್ಬಳ್ಳಿ ಉತ್ತರ ಉಪ ವಿಭಾಗದ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 20/6/2024 ರಂದು ದಾಖಲಾಗಿದ್ದ ಮನೆಗಳ್ಳತನ ಪ್ರಕರಣವನ್ನು ಭೇದಿಸಲು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉತ್ತರ ಉಪವಿಭಾಗದ ಎಸಿಪಿ ಶ್ರೀ ಶಿವಪ್ರಕಾಶ್ ನಾಯಕ್ ರವರ ನೇತೃತ್ವದಲ್ಲಿ ಗೋಕುಲ್ ರೋಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಪ್ರವೀಣ್ ನೀಲಮ್ಮನವರ್ ಮತ್ತವರ ಸಿಬ್ಬಂದಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು.
ಸದರಿ ತಂಡವು ಆರೋಪಿಗಳ ಸುಳಿವಿನ ಬಗ್ಗೆ ಮಾಹಿತಿ ಕಲೆಹಾಕಿ ಇಬ್ಬರು ಆರೋಪಿತರಾದ
1. ದೀಪಕ್ @ ರೋಹನ್ ತಂದೆ ನಾಗೇಂದ್ರ ಮಾತಂಗಿ. 28 ವರ್ಷ, ಖಾನಾಪುರ, ಬೆಳಗಾವಿ.
2 ಶಿವನಾಗಯ್ಯ @ ಶಿವನಾಗು ತಂದೆ ಮುತ್ತಯ್ಯ ಉಮಚಗಿಮಠ. 26 ವರ್ಷ, ರೋಣ, ಗದಗ.
ಎಂಬ ಇಬ್ಬರು ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ವಿಚಾರಣೆ ವೇಳೆ ಇದೇ ಇಬ್ಬರು ಆರೋಪಿಗಳು ಕಳ್ಳತನ ಮಾಡಿದ್ದ ‘ಗೋಕುಲ್ ರೋಡ್ ಠಾಣೆಯ 2, ವಿದ್ಯಾನಗರ ಠಾಣೆಯ 1, ಬೆಳಗಾವಿ ಮಾರಿಹಾಳ ಠಾಣೆಯ 2, ಖಾನಾಪುರ ಠಾಣೆಯ 2, ಬೆಳಗಾವಿ ಮಾಳಮಾರುತಿ ಠಾಣೆಯ 1, ಹೀಗೆ ಒಟ್ಟು 08 ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿದ್ದು, ಆರೋಪಿತರಿಂದ ಕಳ್ಳತನವಾಗಿದ್ದ,
1. 244 ಗ್ರಾಂ ತೂಕದ ಬಂಗಾರದ ಆಭರಣಗಳು
2. 2500 ಗ್ರಾಂ ತೂಕದ ಬೆಳ್ಳಿಯ ಆಭರಣಗಳು
3. 01 ಲ್ಯಾಪಟಾಪ್
4. 01 ಸ್ಕೂಟಿ
5. 02 ವಾಚ್
6. ಕಳ್ಳತನಕ್ಕೆ ಬಳಸಿದ್ದ 1 ಬೈಕ್
ಹೀಗೆ ಒಟ್ಟು 19.50 ಲಕ್ಷ ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆಯನ್ನು ಮುಂದುವರೆಸಿರುತ್ತಾರೆ.
ಸದರಿ ಮನೆಗಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಗೋಕುಲ್ ರೋಡ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮತ್ತವರ ತಂಡದ ಕಾರ್ಯವೈಖರಿಯನ್ನು ಮಾನ್ಯ ಪೋಲಿಸ್ ಆಯುಕ್ತರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.