January 13, 2026
divya-vasantha

ಕನ್ನಡ ಖಾಸಗಿ ಸುದ್ದಿ ವಾಹಿನಿಯ ಖ್ಯಾತ ನಿರೂಪಕಿ ‘ಕರ್ನಾಟಕವೇ ಬೆಚ್ಚಿ ಬೀಳಿಸುವ ಸುದ್ದಿ’ ಕೊಟ್ಟ ದಿವ್ಯಾ ವಸಂತ ಈಗ ಸೋಷಿಯಲ್ ಮೀಡಿಯಾ ಸ್ಟಾರ್. ಯೂಟ್ಯೂಬ್ ಚಾನೆಲ್ ಹೊಂದಿರುವ ಈ ಸುಂದರಿ ಒಮ್ಮೆ ಗಿಚ್ಚಿ ಗಿಲಿಗಿಲಿ ಹಾಸ್ಯ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು.

ಇಂದಿರಾನಗರ ‘ಸ್ಪಾ’ ವ್ಯವಸ್ಥಾಪಕನಿಗೆ ಬೆದರಿಸಿ 15 ಲಕ್ಷ ರು. ಹಣ ಸುಲಿಗೆಗೆ ಯತ್ನಿಸಿದ ಪ್ರಕರಣ ಸಂಬಂಧ ‘ರಾಜ್ ನ್ಯೂಸ್’ ಸುದ್ದಿವಾಹಿನಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸೇರಿ ಇಬ್ಬರನ್ನು ಜಿ.ಬಿ.ನಗರ ಪೊಲೀಸರು ಬಂಧಿಸಿದ್ದಾರೆ. ಸುದ್ದಿವಾಹಿನಿಯ ಸಿಇಒ ರಾಜಾನುಕುಂಟೆ ವೆಂಕಟೇಶ್‌ ಹಾಗೂ ನಿರೂಪಕಿ ದಿವ್ಯಾ ವಸಂತಾ ಸೋದರ ಸಂದೇಶ್‌ ಬಂಧಿತರಾಗಿದ್ದು, ಆರೋಪಿಗಳಿಂದ 3 ಮೊಬೈಲ್ ಜಪ್ತಿ ಮಾಡಲಾಗಿದೆ.

‘ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋಯಿಂದ ನಾನು ತುಂಬಾನೇ ಕಲಿತಿರುವೆ ನನ್ನ ಜೀವನದಲ್ಲಿ ತುಂಬಾನೇ ಕಾಮ್ ಅಗಿದ್ದೀನಿ. 5 ವರ್ಷ ಮೀಡಿಯಾ ಫೀಲ್ಡ್‌ನಲ್ಲಿ ಇದ್ದೀನಿ ಈ 5 ವರ್ಷನೂ ಬರೀ ಕಷ್ಟ ನೋಡಿದ್ದೀನಿ ಏಕೆಂದರೆ ಯಾವುದೇ ನ್ಯೂಸ್ ಚಾನೆಲ್‌ಗೆ ಹೋ          ದರೂ ಒಂದೇ wave lenght ಇತ್ತು ಯಾವುದೇ ಹೈ ಲೋ ಏನೂ ಇಲ್ಲ.

ನ್ಯೂಸ್ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿರುವುದು ಅಂದ್ರೆ ಜನರು ಬೇರೆ ರೀತಿನೇ ನೋಡುತ್ತಾರೆ, ಸಿಕ್ಕಾಪಟ್ಟೆ ಸುದ್ದು ಮಾಡ್ತಾರೆ ಬೇರೆ ತರನೇ ಲೈಫ್‌ ಸ್ಟೈಲ್ ಐಷಾರಾಮಿ ಜೀವನ ಮಾತ್ರ ಅಂದುಕೊಳ್ಳುತ್ತಾರೆ. 5-6 ತಿಂಗಳು ನಾನು ಸಂಬಳ ಇಲ್ಲದೆ ಕೆಲಸ ಮಾಡಿದ್ದೀನಿ. ಈ ಪರಿಸ್ಥಿತಿಯಲ್ಲಿ ಓಡಾಡುವುದಕ್ಕೂ ದುಡ್ಡು ಇಲ್ಲ ಮನೆಯಲ್ಲೂ ಬೈತಾ ಇರ್ತಾರೆ ತಿನ್ನೋದು ದುಡ್ಡು ಇರಲ್ಲ ಯಾರಿಗೂ ಹೇಳಲು ಆಗಲ್ಲ’ ಎಂದು ಖಾಸಗಿ ಸಂದರ್ಶನದಲ್ಲಿ ದಿವ್ಯಾ ಮಾತನಾಡಿದ್ದಾರೆ

Leave a Reply

Your email address will not be published. Required fields are marked *