ಚೆನ್ನೈ: ಗಾಂಜಾ ವ್ಯಸನಿಯಾಗಿದ್ದ ಮಗನನ್ನು ತಾಯಿಯೇ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸ್ ಠಾಣೆಗೆ ಒಪ್ಪಿಸಿದ ಅಚ್ಚರಿಯ ಘಟನೆ ಚೆನ್ನೈನಲ್ಲಿ ನಡೆದಿದೆ. ಸರಕು ವಾಹನದ ಚಾಲಕನಾದ ಶ್ರೀರಾಮ್ ಇತ್ತೀಚೆಗೆ ಗಾಂಜಾ ಸೇವನೆ ಅಭ್ಯಾಸ ಬೆಳೆಸಿಕೊಂಡಿದ್ದ. ಈ ಬಗ್ಗೆ ತಾಯಿಯೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿ ದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಶ್ರೀರಾಮ್ ಮನೆ ಮೇಲೆ ದಾಳಿ ಮಾಡಿದ್ದರು.
ಪೊಲೀಸರು ದಾಳಿ ಮಾಡಿದಾಗ 2 ಲಕ್ಷ ರು. ಮೌಲ್ಯದ 630 ಮಿಲೀ ಗಾಂಜಾ ಮದ್ಯ ವಶ ಪಡಿಸಿಕೊಂಡಿದ್ದಾರೆ . ಸದ್ಯ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಒಡಿಶಾ, ತಮಿಳುನಾಡು, ಕೇರಳದಲ್ಲಿ ನಡೆಯುತ್ತಿದ್ದ ಗಾಂಜಾ ಮಾರಾಟ ಜಾಲ ಬಯಲಾಗಿದೆ.