ಹುಬ್ಬಳ್ಳಿ : ವಾಣಿಜ್ಯ ನಗರಿ , ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯ ಮಾರುಕಟ್ಟೆ ಪ್ರದೇಶಕ್ಕೆ ನಕಲಿ ಆಸಾಮಿಗಳ ಹಾವಳಿ ಶುರುವಾಗಿದ್ದು ವ್ಯಾಪಾರಸ್ತರಿಗೆ ಕಿರುಕಳ ಶುರುವಾಗಿದೆ. ವೆಬ್ ಸೈಟ್ , ಸಂಘಟನೆ ಹೆಸರಿನಲ್ಲಿ ಹಣದ ಸುಲಿಗೆಯ ಮುಖ್ಯ ಉದ್ದೇಶದಿಂದಲೇ ಅಮಾಯಕ ವ್ಯಾಪಾರಸ್ಥರುನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಮಾರುಕಟ್ಟೆಗೆ ಬರುವ ಗುಡಿ ಕೈಗಾರಿಕೆಯ ಆಹಾರ ಪದಾರ್ಥ, ಪ್ಲಾಸ್ಟಿಕ್ ದಾಸ್ತಾನು ಮಾರಾಟ ಮಾಡುವ ಅಂಗಡಿಗಳಿಗೆ ಬೇಟಿ ನೀಡುತ್ತಿರುವ ಆಸಾಮಿಗಳು ತಾವು ಪತ್ರಕರ್ತರು ಎಂದು ಹಾಗೂ ಕನ್ನಡ ಪರ ಸಂಘಟನೆ ಯವರೂ ಎಂದು ಪರಿಚಯ ಮಾಡಿಕೊಂಡು ನಂತರ ತಮ್ಮ ಕಚೇರಿಗೆ ಬಂದು ಬೇಟಿ ಆಗಬೇಕು ಎಂದು ತಾಕೀತು ಮಾಡುವುದು ಅಲ್ಲದೆ ನಿಮ್ಮ ನ್ಯೂನತೆಗಳ ಬಗ್ಗೆ ನಾವು ಸುದ್ದಿ ಮಾಡುತ್ತವೆ ಇಲ್ಲಾ ಹೋರಾಟ ಮಾಡುತ್ತೇವೆ ಬೆದರಿಸುತ್ತಿದ್ದು ನೈತಿಕ ಪೊಲೀಸ್ ಗಿರಿ ನಡೆಸುತ್ತಿರುವುದು ಕಂಡು ಬಂದಿದೆ.
ಸದ್ಯ ಈ ಕುರಿತು ಸ್ಥಳೀಯ ಪೊಲೀಸರಿಗೆ ಮನವಿ ಮಾಡಿರುವ ವ್ಯಾಪಾರಸ್ಥರು ತಾವುಗಳು ತಪ್ಪು ಮಾಡಿದ್ದಲ್ಲಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲು ಅದು ಬಿಟ್ಟು ನಮ್ಮ ಅಂಗಡಿ ಮುಗ್ಗಟ್ಟುಗಳಿಗೆ ಬಂದು ಬೆದರಿಕೆ ಹಾಕಿ ಹಣಕ್ಕಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದು ಮುಂದೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.