ಬೆಂಗಳೂರು : ಕಾರ್ಮಿಕ ಸಚಿವ ಹಾಲಿ ಕಲಘಟಗಿ ಕ್ಷೇತ್ರದ ಶಾಸಕ ಸಂತೋಷ್ ಲಾಡ್ ಗೆ ಕೆಪಿಸಿಸಿ ಅಧ್ಯಕ್ಷಗಿರಿ ಒಲಿದು ಬರಲಿದಿಯಾ ಎನ್ನುವ ಗುಸು ಗುಸು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.ಸಾದ್ಯ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವಧಿ ಮುಕ್ತಾಯವಾಗಿದ್ದು ಸಮರ್ಥ ನಾಯಕತ್ವಕ್ಕಾಗಿ ಎಐಸಿಸಿ ಹುಡುಕಾಟ ಆರಂಭಿಸಿದೆ.
ಜಾತಿವಾರು ಹಾಗೂ ಪ್ರಾಂತ್ಯವರು ಲೆಕ್ಕಾಚಾರ ಹಾಕಿ ಅಲ್ಪ ಸಂಖ್ಯಾತ ಕೋಟಾದಲ್ಲಿ ಜಮೀರ್ ಅಹ್ಮದ್, ರಿಜ್ವಾನ್ ಅರ್ಷದ್ ,ದಲಿತ ಕೋಟಾದಲ್ಲಿ ಸತೀಶ್ ಜಾರಕಿಹೊಳಿ, ಪ್ರಿಯಾಂಕ ಖರ್ಗೆ.ಲಿಂಗಾಯತ ಕೋಟಾದಲ್ಲಿ ಈಶ್ವರ ಖಂಡ್ರೆ , ಎಂ ಬೀ ಪಾಟೀಲ್ ,ಕ್ರಿಶ್ಚಿಯನ್ ಕೋಟಾದಲ್ಲಿ ಕೆ ಜಿ ಜಾರ್ಜ್ ಹಾಗು ಮರಾಠ ಕೋಟಾದಲ್ಲಿ ಸಂತೋಷ್ ಲಾಡ್ ಹೆಸರೂ ಮುಂಚೂಣಿಯಲ್ಲಿ ಇದ್ದು ಹೈ ಕಮಂಡ್ ಯಾರಿಗೆ ಮನೆ ಹಾಕಲಿದೆ ಎನ್ನುವುದನ್ನ ಕಾದು ನೋಡಬೇಕಿದೆ .
ಸದ್ಯ ಇನ್ನೊಂದು ಲೆಕ್ಕಾಚಾರದಲ್ಲಿ ಸಿಎಂ ಸಿದ್ದರಾಮಯ್ಯ ಗುಂಪಿನ ಪ್ರಮುಖ ನಾಯಕರನ್ನೇ ಬಹುತೇಕ ಕೆಪಿಸಿಸಿ ಅಧ್ಯಕ್ಷಗಿರಿಗೆ ಫೈನಲ್ ಮಾಡುವ ಸಾದ್ಯತೆ ಕೂಡ ಇದ್ದು ,ಅಹಿಂದ ವರ್ಗಕ್ಕೆ ಹೆಚ್ಚಿನ ಪ್ರಾಮುಕ್ಯತೆ ನೀಡಿದರು ಅಚ್ಚರಿ ಪಡಬೇಕಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ