August 19, 2025
WhatsApp Image 2024-07-02 at 11.58.47_8c73daeb

ಫೋನ್‌ಗಾಗಿ ರಸ್ತೆ ಪಕ್ಕದಲ್ಲೇ ಪ್ರೇಮಿಗಳು ಜಗಳ ಮಾಡಿಕೊಂಡಿದ್ದು, ಅದು ಸಾರ್ವಜನಿಕ ಸಭ್ಯತೆ ಮೀರಿದಾಗ ಹುಡುಗನಿಗೆ ಸಾರ್ವಜನಿಕರ ಗೂಸಾ ನೀಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಕಿತ್ತಾಡುತ್ತಿರುವ ಪ್ರೇಮಿಗಳ ಜಗಳದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ರಸ್ತೆ ಪಕ್ಕದಲ್ಲಿ ನಿಂತು ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಫೋನ್‌ ಕೊಡು ಎಂದು ಹುಡುಗ ಪೀಡಿಸಿದ್ದು, ಆಕೆ ಕೊಡದೆ ಹೋದಾಗ ಆಕೆಯ ಕೊರಳಿಗೆ ಸ್ಕಾರ್ಫ್‌ ಸುತ್ತು ಹಾಕಿ ಎಳೆದಾಡಿದ್ದಾನೆ ಹುಡುಗ.

ಲವರ್‌ ಬಾಯ್‌ನ ಈ ಕೃತ್ಯ ನೋಡಿದ ಸ್ಥಳೀಯರು ರೊಚ್ಚಿಗೆದ್ದು ಮಧ್ಯಪ್ರವೇಶಿಸಿದ್ದಾರೆ. ನಮ್ಮ ಮಧ್ಯೆ ನೀವು ಬಂದಿದ್ದೇಕೆ ಎಂದು ಉಡಾಫೆಯಿಂದ ಹುಡುಗ ಉತ್ತರಿಸಿದಾಗ ಕ್ರುದ್ಧರಾದ ಸಾರ್ವಜನಿಕರು ಆತನಿಗೆ ಚೆನ್ನಾಗಿ ಗೂಸಾ ಕೊಟ್ಟಿದ್ದಾರೆ. ʼಸಾರ್ವಜನಿಕ ಸಭ್ಯತೆ ಪಾಲಿಸಿʼ ಎಂದು ಪಾಠ ಹೇಳಿದ್ದಾರೆ. ಲವರ್ಸ್ ಜಗಳದ ವಿಡಿಯೋ ಸಾಮಾಜಿಕ‌ ಜಾಲತಾಣಗಳಲ್ಲಿ‌ ಫುಲ್ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *