September 17, 2024

ಹುಬ್ಬಳ್ಳಿಜು.01: ತಾಲೂಕಿನ ತೋಟಗಾರಿಕೆ ಬೆಳೆಗಾರರಿಗೆ ಹಾಗೂ ರೈತ ಉತ್ಪಾದಕ ಕಂಪನಿಯ ರೈತರು 2024-25ನೇ ಸಾಲಿನ ಹುಬ್ಬಳ್ಳಿ ತಾಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಹನಿ ನೀರಾವರಿ), ಯಂತ್ರೋಪಕರಣ ಯೋಜನೆಗಳಡಿಯಲ್ಲಿ ಅರ್ಹ ಫಲಾನುಭವಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಹಣ್ಣು (ಬಾಳೆ), ಹೈಬ್ರಿಡ್ ತಕಾರಿಗಳ ಪ್ರದೇಶ ವಿಸ್ತರಣೆ ಮತ್ತು ಹೂವು ಪ್ರದೇಶ ವಿಸ್ತರಣೆ (ಕತ್ತರಿಸಿದ ಹೂ, ಗಡ್ಡೆ ಜಾತಿಯ ಹೂ, ಬಿಡಿ ಹೂ) ವೈಯಕ್ತಿಕ ಕೃಷಿಹೊಂಡ. ಸಮುದಾಯ ಕೃಷಿಹೊಂಡ, ಸಣ್ಣ ಟ್ಯಾಕ್ಟರ್ (Uಠಿಣo 20 Pಖಿಔ ಊP), ಪಾಲಿಹೌಸ್, ನೆರಳು ಪರದೆ, ಈರುಳ್ಳಿ ಶೇಖರಣಾ ಘಟಕ, ಪ್ಯಾಕ್ ಹೌಸ್ ಹಾಗೂ ತಳ್ಳುವ ಗಾಡಿ ಘಟಕಗಳಿಗೆ ರೈತರಿಗೆ ಸಹಾಯಧನ ಸೌಲಭ್ಯಗಳಿರುತ್ತವೆ.

ಹನಿ ನೀರಾವರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗಳಾದ ಹಣ್ಣು ಮತ್ತು ತರಕಾರಿಗಳಿಗೆ ಸಹಾಯಧನ ಸೌಲಭ್ಯ ಇರುತ್ತದೆ. ಯಂತ್ರೋಪಕರಣಗಳ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಸಂಬAಧಿಸಿದ ಯಂತ್ರೋಪಕರಣಗಳಿಗೆ ಸಹಾಯಧನ ಸೌಲಭ್ಯ ಕೂಡ ಇದೆ. ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ರೈತರು ಸ್ವಂತ ಜಮೀನು ಮತ್ತು ನೀರಾವರಿ ಸೌಲಭ್ಯ ಹೊಂದಿರಬೇಕು. ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ, ಗಣಕೀಕೃತ ಬೆಳೆ ದೃಢೀಕರಣ ಪತ್ರ ಹಾಗೂ ರಾಷ್ಟ್ರೀಕೃತ ಬ್ಯಾಂಕಗಳ ಪಾಸ್ ಬುಕ್ ಹೊಂದಿರಬೇಕು.

(ಈIಆ ಸಂಖ್ಯೆ ಹೊಂದಿರಬೇಕು) ಪರಿಶಿಷ್ಟ ಜಾತಿ 17%, ಪರಿಶಿಷ್ಟ ಪಂಗಡ 7%, ಮಹಿಳೆ 33%, ಅಲ್ಪಸಂಖ್ಯಾತರು 5 % ಹಾಗೂ ಅಂಗವಿಕಲರಿಗೆ ಶೇ 3 ರಂತೆ ಮೀಸಲಾತಿಗೆ ಆದ್ಯತೆ ನೀಡಲಾಗುವುದು. ಸಹಾಯಕ ತೋಟಗಾರಿಕೆ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಹುಬ್ಬಳ್ಳಿ (ಮೊ.ನಂ.9740164868) ಸಹಾಯಕ ತೋಟಗಾರಿಕೆ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಛಬ್ಬಿ (ಮೊ.ನಂ.9164126426) ಸಹಾಯಕ ತೋಟಗಾರಿಕ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಶಿರಗುಪ್ಪಿ (ಮೊ.ನಂ. 9663474155) ರವರನ್ನು ಸಂಪರ್ಕಿಸಿ, ಜುಲೈ 15 ರೊಳಗೆ ಅರ್ಜಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಪ್ರಭುಲಿಂಗ ಆರ್. ಗಡ್ಡದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *