ಹಿರಿಯ ಬರಹಗಾರ ಅಗ್ನಿ ಶ್ರೀಧರ್ ಅವರು ರೇಣುಕಾಸ್ವಾಮಿ ಮರ್ಡರ್ ಹಾಗೂ ಕೊಲೆ ಆರೋಪಿಗಳಾಗಿ ಜೈಲಿನಲ್ಲಿ ಇರುವ ದರ್ಶನ್ ಮತ್ತು ಗ್ಯಾಂಗ್ ಬಗ್ಗೆ ಮಾತನಾಡಿದ್ದಾರೆ. ಹೌದು, ಈ ಕುರಿತು ಮಾತನಾಡಿರುವ ಖ್ಯಾತ ಬರಹಗಾರ ಅಗ್ನಿ ಶ್ರೀಧರ್, ‘ರೇಣುಕಾಸ್ವಾಮಿ ಅನ್ನೋ ಆ ಹುಡಗನ್ನ ಚಿತ್ರದುರ್ಗದಿಂದ ಎತ್ತಾಕ್ಕೊಂಡು ಬಂದಿರೋದು ಬಹಳ ದೊಡ್ಡ ಅಪರಾಧ. ಅವ್ನು ಬದುಕಿಬಿಟ್ಟಿದ್ದಿದ್ರೂ, ಅವ್ನಿಗೆ ಸ್ವಲ್ಪ ಏಟ್ ಕೋಟ್ಟು ಕಳಿಸಿದ್ದಿದ್ರೂ ಅದು ತುಂಬಾ ಗಭೀರ ಅಪರಾಧ. ಅವ್ನೇನಾದ್ರೂ ಕಿಡ್ನಾಪ್ ಮಾಡಿದ್ದಕ್ಕೆ ಕಂಪ್ಲೇಂಟ್ ಕೊಟ್ಟಿದ್ದಿದ್ರೆ ಅದೇ ಒಂದು ಮಹಾ ಅಪರಾಧ ಆಗಿರ್ತಾ ಇತ್ತು.
ಅದು ಮಹಾ ಸೀರಿಯಸ್ ಕೇಸ್ ಆಗ್ತಿತ್ತು. ದರ್ಶನ್ ತನ್ನ ಮೇಲೆ ತಾನು ಹಿಡಿತ ಕಳ್ಕೊಂಡ್ಬಿಟಿದಾನೆ. ಹೆಣ್ಣುಮಕ್ಳು ನೋವು ಅನುಭವಿಸುವಾಗ, ಅದ್ರಲ್ಲೂ ನಮಗೆ ಸಂಬಂಧಪಟ್ಟ ಹೆಣ್ಣುಮಕ್ಕಳು ಮಾನಸಿಕ ಹಿಂಸೆಯಿಂದ ನರಳುತ್ತಿರುವಾಗ ನಮಗೆ ಅದಕ್ಕೆ ಕಾರಣರಾದವರ ಮೇಲೆ ಸಹಜವಾಗಿಯೇ ಸಿಟ್ಟು ಬರುತ್ತೆ. ಆದ್ರೆ, ನಾವೆಲ್ಲಾ ನಮ್ಮ ಹಿಡಿತ ಕಳ್ಕೊಳ್ಳೋದಿಲ್ಲ. ಜತೆಗೆ, ಅದು ನಮ್ಮ ಹೆಣ್ಣುಮಗ್ಳಿಗೆ ಮಾತ್ರ ಆಗಿದೆ ಅನ್ನೋ ತರ ಯೋಚ್ನೆ ಮಾಡ್ವಷ್ಟು ಅವಿವೇಕಿಗಳು ನಾವು ಆಗೋದಿಲ್ಲ. ಇದು ತುಂಬಾ ಜನಕ್ಕೆ ಆಗುತ್ತೆ, ನಮಗೂ ಆಗಿದೆ ಅಂತ ಹೇಳಿ ಅರ್ಥ ಮಾಡ್ಕೋತೀವಿ. ಆದ್ರೆ ಅದನ್ನೆಲ್ಲ ಮಾಡೋದು ಬಿಟ್ಟು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದು ಮಹಾ ಅಪರಾಧ. ಆ ಹುಡುಗನ್ನ ಅಲ್ಲಿಂದ ಏನ್ ಹೇಳಿ ಕರ್ಕೊಂಡು ಬಂದಿದಾರೆ ಅನ್ನೋದು ಕೂಡ ಸ್ಪಷ್ಟವಾಗಿಲ್ಲ.
ಎಲ್ಲರೂ ಸೇರಿ ತುಮಕೂರಲ್ಲಿ ತಿಂಡಿ ತಿಂದಿದಾರೆ, ಅದಕ್ಕೆ ರೇಣುಕಾಸ್ವಮಿಯೇ ಎಲ್ಲರ ಬಿಲ್ ಪಾವತಿ ಮಾಡಿದಾನೆ ಅಂತೆಲ್ಲ ಸುದ್ದಿಯಿದೆ. ಹಾಗೆ ಆಗಿದ್ದಿದ್ದರೆ, ಅದು ಕಿಡ್ನಾಪ್ ಅಂತ ಹೇಳೋದಕ್ಕೂ ಆಗಲ್ಲ. ಆದ್ರೆ ಅದನ್ನೆಲ್ಲ ಮಾಡೋದು ಬಿಟ್ಟು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದು ಮಹಾ ಅಪರಾಧ. ಆ ಹುಡುಗನ್ನ ಅಲ್ಲಿಂದ ಏನ್ ಹೇಳಿ ಕರ್ಕೊಂಡು ಬಂದಿದಾರೆ ಅನ್ನೋದು ಕೂಡ ಸ್ಪಷ್ಟವಾಗಿಲ್ಲ. ಎಲ್ಲರೂ ಸೇರಿ ತುಮಕೂರಲ್ಲಿ ತಿಂಡಿ ತಿಂದಿದಾರೆ, ಅದಕ್ಕೆ ರೇಣುಕಾಸ್ವಮಿಯೇ ಎಲ್ಲರ ಬಿಲ್ ಪಾವತಿ ಮಾಡಿದಾನೆ ಅಂತೆಲ್ಲ ಸುದ್ದಿಯಿದೆ. ಹಾಗೆ ಆಗಿದ್ದಿದ್ದರೆ, ಅದು ಕಿಡ್ನಾಪ್ ಅಂತ ಹೇಳೋದಕ್ಕೂ ಆಗಲ್ಲ. ಅವೆಲ್ಲಾ ಮುಂದೆ ಕಾನೂನು ರೀತಿಯಲ್ಲಿ ಕೇಸ್ ನಡೆದಾಗ ಹೊರಗೆ ಬರುತ್ತೆ . ಆದ್ರೆ, ಕನ್ನಡದ ಸ್ಟಾರ್ ನಟನೊಬ್ಬ, ಅದೂ ಕೂಡ ಭಾರೀ ಜನಪ್ರಿಯ ನಟನೊಬ್ಬ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿರೋದು ಇದ್ಯಲ್ಲಾ, ಅದು ತುಂಬಾ ನೋವಿನ ಸಂಗತಿ. ಆದ್ರೆ ನಟ ದರ್ಶನ್‌ಗೆ ಘೋರ ಶಿಕ್ಷೆ ಆಗ್ಬಾರ್ದು, ಅವ್ನು ಬದಲಾಗೋದಕ್ಕೆ ಅವಕಾಶ ಸಿಗ್ಬೇಕು ಎಂದಿದ್ದಾರೆ