August 19, 2025
darshan-30-1

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ.ಇನ್ನೂ ಇದಕ್ಕೆ ಸಂಬಂಧಿಸಿದಂತೆ ಮಾಹಿತಿಯೊಂದು ಲಭ್ಯವಾಗಿದೆ. ಹೌದು ಭಾನುವಾರ ಮುಂಜಾನೆ 4:30ರ ವೇಳೆಗೆ ಶೆಡ್‍ಗೆ ಎಂಟ್ರಿಯಾಗಿರೋ ಆರೋಪಿ ದರ್ಶನ್, 50 ನಿಮಿಷಗಳ ಕಾಲ ರೇಣುಕಾಸ್ವಾಮಿಯ ಮೇಲೆ ಕ್ರೌರ್ಯ ಮೆರೆದಿದ್ದಾರೆ.

ಸಿನಿಮಾ ಸ್ಟೈಲ್‍ʼನಲ್ಲಿ ಹೊರಗಡೆ ಯಾರಿಗೂ ಕಾಣದಂತೆ ಹಾಗೂ ರೇಣುಕಾಸ್ವಾಮಿಯ ಕೂಗಾಟ ಚೀರಾಟ ಹೊರಗಡೆ ಯವರಿಗೆ ಕೇಳದಂತೆ ಶೆಡ್‍ನಲ್ಲಿ ಸೀಜ್ ಮಾಡಿರುವ ಕಾರುಗಳಿಂದ ಸುತ್ತಲು ಕೋಟೆ ರೀತಿಯಲ್ಲಿ ಕಟ್ಟಿಕೊಂಡಿದ್ದಾರೆ. ಅಲ್ಲದೇ ಶೆಡ್‍ನ ಒಳಗಡೆ ಕಾರುಗಳು ಇದ್ದವು. ನಟ ದರ್ಶನ್ ಪ್ರಕರಣದ ಎ3 ಆರೋಪಿಯಾಗಿರೋ ಪವನ್ ಕೈಗೆ ಮೊಬೈಲ್ ಕೊಟ್ಟು ಕೊಲೆಯಾಗಿರೋ ರೇಣುಕಾಸ್ವಾಮಿ ಮಾಡಿರುವ ಮೆಸೇಜ್ ಗಳನ್ನ ಓದಲು ದರ್ಶನ್ ಹೇಳಿದ್ದಾರೆ.

ಇತ್ತ ಬಾಸ್ ಮಾತಿನಂತೆ ಎ3 ಆರೋಪಿ ಪವನ್ ಜೋರು ಧ್ವನಿಯಲ್ಲಿ ರೇಣುಕಾಸ್ವಾಮಿ ಮಾಡಿರುವ ಸಂದೇಶಗಳನ್ನ ಒಂದೊಂದಾಗಿ ಓದಿ ಹೇಳಿದ್ದಾನೆ. ಈ ವೇಳೆ ದರ್ಶನ್ ಪ್ರತಿಯೊಂದು ಮೇಸೆಜ್‌ʼಗೂ ಒಂದೊಂದು ಪಂಚ್ ಎಂಬಂತೆ ಶೂ ಕಾಲಿನಿಂದ ಒಮ್ಮೆ ಒದ್ರೆ ಕಾರುಗಳಿಗೆ ಹೋಗಿ ರೇಣುಕಾಸ್ವಾಮಿ ಬಡಿದು ಮತ್ತೆ ಕೆಳಗಡೆ ಬೀಳುತ್ತಾರೆ. ಬಳಿಕ ಮತ್ತೊಂದು ಸಂದೇಶ ಓದಿದ ಕೂಡಲೇ ಮತ್ತದೇ ಪಂಚ್. ಹೀಗೆ ಸುಮಾರು 30 ನಿಮಿಷಗಳ ಕಾಲ ದರ್ಶನ್ ರೇಣುಕಾಸ್ವಾಮಿಯ ಮೇಲೆ ಸಿನಿಮಾ ರೀತಿಯಲ್ಲೇ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ

Leave a Reply

Your email address will not be published. Required fields are marked *