August 19, 2025
Screenshot 2024-06-28 115340

ಹುಬ್ಬಳ್ಳಿ: ಇತ್ತೀಚಿಗೆ ಅಷ್ಟೇ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಪಿಎಂ ವೈಎಸ್ ಬಿಲ್ಡಿಂಗ್ ಅನ್ನು ಕಟ್ಟಲಾಗಿತ್ತು ಕಳಪೆ ಕಾಮಗಾರಿ ಹಾಗೂ ಅರೆಬರೆ ಕಾರ್ಯ ನಡೆದಿರುವ ಶಂಕೆ ಇದ್ದು ಇದೇ ಕಾರಣಕ್ಕೆ ಹುಬ್ಬಳ್ಳಿ ಕಿಮ್ಸ್ ನೂತನ ಕಟ್ಟಡದ ಕೆಳ ಅಂತಸ್ತಿನ ಭಾಗದಲ್ಲಿ ಮೇಲ್ಗಡೆ ಭಾಗ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಸದ್ಯ ಸ್ಥಳಕ್ಕೆ ವಿದ್ಯಾನಗರ ಪೊಲೀಸ್ ಠಾಣೆಯ ಸಿಬ್ಬಂದಿ, ಕಿಮ್ಸ್ ನಿರ್ದೇಶಕರು ಹಾಗೂ ಆಡಳಿತ ಮಂಡೆ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು

ಈ ಅವಘಡಕ್ಕೆ ಕಾರಣ ಏನು ಎನ್ನುವ ಸತ್ಯಶೋಧನೆಯಲ್ಲಿ ತೊಡಗಿದ್ದಾರೆ. ಮೇಲ್ನೋಟಕ್ಕೆ ಇದು ಕಳಪೆ ಕಾಮಗಾರಿಯಿಂದ ದುರಂತ ಸಂಭವಿಸಿದೆ ಎನ್ನಲಾಗಿದ್ದು ತನಿಖೆ ಮಾಡುತ್ತಾರೆ ಎನ್ನುವುದು ಯಕ್ಷಪ್ರಶ್ನೆಯಾಗಿ ಉಳಿಯಲಿದೆ

Leave a Reply

Your email address will not be published. Required fields are marked *