January 13, 2026
Screenshot 2024-06-27 134204

ಕಾಲೇಜಿನಲ್ಲಿ ವಿಧಿಸಿರುವ ಡ್ರೆಸ್‌ ಕೋಡ್ ತಮ್ಮ ಖಾಸಗಿತನದ ಹಕ್ಕು, ಘನತೆ ಹಾಗೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಿದೆ ಎಂದು ಪ್ರಶ್ನಿಸಿ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ವಜಾಮಾಡಿದೆ. ಹಿಜಾಬ್, ನಿಕಾಬ್, ಬುರ್ಖಾ, ಟೋಪಿ ಮತ್ತು ಸ್ಟೋಲ್ ಧರಿಸಲು ಮುಂಬೈನ ಕಾಲೇಜೊಂದು ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಕೆಲವು ವಿದ್ಯಾರ್ಥಿನಿಯರು ನ್ಯಾಯಾಲಯದ ಮೊರೆ ಹೋಗಿದ್ದರು.

ಚೆಂಬೂ‌ರ್ ಟ್ರಾಂಬೆ ಎಜುಕೇಷನ್‌ ಸೊಸೈಟಿಯ ಎನ್‌.ಜಿ. ಆಚಾರ್ಯ ಮತ್ತು ಡಿ.ಕೆ. ಮರಾಠ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಈ ಅರ್ಜಿ ಸಲ್ಲಿಸಿದ್ದರು. ‘ಕಾಲೇಜಿನ ಆಡಳಿತ ಮಂಡಳಿ ಕೈಗೊಂಡ ತೀರ್ಮಾನವು ಕಾನೂನಿಗೆ ಅನುಗುಣವಾಗಿಲ್ಲ’ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಕಾಲೇಜಿನಲ್ಲಿ ವಿಧಿಸಿರುವ ವಸ್ತ್ರ ಸಂಹಿತೆಯು ತಮ್ಮ ಖಾಸಗಿತನದ ಹಕ್ಕು, ಘನತೆ ಹಾಗೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಿದೆ ಎಂದು ವಿದ್ಯಾರ್ಥಿನಿಯರು ಹೇಳಿದ್ದರು.

“ನಾವು ನಮ್ಮ ನಿಲುವಿಗೆ ಬದ್ಧರಾಗಿದ್ದೇವೆ. ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ವಿದ್ಯಾರ್ಥಿನಿಯರ ಪರ ವಕೀಲ ಅಲ್ತಾಫ್ ಖಾನ್ ಹೇಳಿದ್ದಾರೆ. ಇನ್ನೂ ಡ್ರೆಸ್ ಕೋಡ್ ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೆ; ಅದು ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿರುವಂಥದ್ದಲ್ಲ ಎಂದು ಕಾಲೇಜಿನ ಪರ ವಕೀಲರು ಹೇಳಿದ್ದಾರೆ.

Leave a Reply

Your email address will not be published. Required fields are marked *