August 18, 2025
1200-675-19787316-thumbnail-16x9-meg

14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಮಾಡಿ 65 ವರ್ಷದ ವೃದ್ಧ ಜೈಲು ಸೇರಿರುವ ಘಟನೆ ಹುಲಸೂರು ಸಮೀಪದ ಭಾಲ್ಕಿ ತಾಲೂಕಿನ ಮೇಹಕರ ಪೊಲೀಸ್‌ ಠಾಣೆ ವ್ಯಾಪ್ತಿಯ ಗ್ರಾಮ ಒಂದರಲ್ಲ  ನಡೆದಿದೆ.

ಗ್ರಾಮದ ಭೀಮಾ ತಂದೆ ನರಸಿಂಗರಾವ ಸೂರ್ಯವಂಶಿ(65) ಆರೋಪಿ ಆಗಿದಾನೆ. ಆರೋಪಿಯ ಮನೆಯ ಪಕ್ಕ ಅಪ್ರಾಪ್ತ ವಯಸ್ಸಿನ ಬಾಲಕಿಯ ಚಿಕ್ಕಮ್ಮನ ಮನೆ ಆಗಿದ್ದು, ಆಗಾಗ ಬಾಲಕಿ ಚಿಕ್ಕಮ್ಮನ ಮನೆಗೆ ಬರುತ್ತಿದ್ದಳು. ಯಾರು ಇಲ್ಲದ ಸಮಯವನ್ನು ಸಾಧಿಸಿ ಬಾಲಕಿಗೆ ಪುಸಲಾಯಿಸಿ ನಿರಂತರ ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೇಹಕರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿ ವೈ ಎಸ್ ಪಿ ಪಾವಡಶೆಟ್ಟಿ, ಸಿಪಿಐ ಜಿ.ಎಸ್ ಬಿರಾದಾರ, ಪಿ ಎಸ್ ಐ ಮಾಣಿಕಪ್ಪ ಸೇರಿದಂತೆ ಪೊಲೀಸ್‌ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

 

Leave a Reply

Your email address will not be published. Required fields are marked *