
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದೆ. ಆದರೆ ಜೈಲು ಸೇರಿದ ನಟನನ್ನು ಸೆಕ್ಯುರಿಟಿ ಸೆಲ್‍ನಲ್ಲಿ ಇಟ್ಟಿರುವುದು ಕುತೂಹಲ ಹುಟ್ಟಿದೆ. ಹೌದು. ವಿಐಪಿ ಸೆಲ್ ಪಕ್ಕದ ಸೆಕ್ಯುರಿಟಿ ಸೆಲ್ ನಲ್ಲಿ ದರ್ಶನ್ ವಾಸವಾಗಿದ್ದಾರೆ. ಈ ಸೆಲ್‍ಗೆ ಇತರೆ ಯಾವುದೇ ಆರೋಪಿಗಳು ಅಥವಾ ಸಿಬ್ಬಂದಿಗೆ ಎಂಟ್ರಿ ಇಲ್ಲ. ಈ ಮೂಕ ನಟನನ್ನು ಸೆಕ್ಯುರಿಟಿ ಸೆಲ್ ನಲ್ಲಿಟ್ಟು ಸಿಬ್ಬಂದಿ ರಕ್ಷಣೆ ನೀಡುತ್ತಿದ್ದಾರೆ.
ಇನ್ನು ಕೊಲೆ ಆರೋಪಿಗಳು ಒಟ್ಟಿಗೆ ಸೇರಿ ಸಾಕ್ಷ್ಯಗಳ ಮೇಲೆ ಪರಿಣಾಮ ಬೀರಬಹುದು. ರೇಣುಕಾಸ್ವಾಮಿ ಕೊಲೆ ಕೇಸ್ ಸಾಕಷ್ಟು ಸದ್ದು ಮಾಡಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಇತರೆ ನಟರ ಫ್ಯಾನ್ಸ್‍ಗಳಿದ್ದು, ಜೈಲಿನಲ್ಲೂ ಫ್ಯಾನ್ಸ್‍ಗಳ ನಡುವೆ ಗಲಾಟೆ ಆಗುವ ಸಾಧ್ಯತೆಗಳಿವೆ.
ಮತ್ತೊಂದು ಕಡೆ ಕೆಲ ದರ್ಶನ್ ಅಭಿಮಾನಿಗಳಿಂದಲೇ ಆರೋಪಿಗಳ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇದೆ. ಈ ನಡುವೆ ದರ್ಶನ್ ಜೈಲಿಗೆ ಬರಲು, ಜೊತೆಗಿದ್ದವರೇ ಕಾರಣ ಅನ್ನೋ ಮಾತುಗಳು ಕೇಳಿಬಂದಿವೆ. ಈ ಎಲ್ಲಾ ಕಾರಣಗಳಿಂದಾಗಿ ನಟ ದರ್ಶನ್ ರನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡುವಂತೆ ಎಸ್‍ಪಿಪಿ ಮನವಿ ಮಾಡಿದ್ದಾರೆ.