ನೀಟ್’ನಲ್ಲಿ (ಯುಜಿ) ಅಕ್ರಮಗಳು ನಡೆದಿವೆ ಎಂಬ ದೂರುಗಳು ವ್ಯಾಪಕವಾಗಿರುವ ಹೊತ್ತಿನಲ್ಲಿ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸಿದ ಯುಜಿಸಿ-ನೆಟ್ ಪರೀಕ್ಷೆಯು ರದ್ದಾಗಿರುವುದು ಪರೀಕ್ಷಾ ವ್ಯವಸ್ಥೆಯ ಬಗ್ಗೆಯೇ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ. ಯುಜಿಸಿ-ನೆಟ್ ಪರೀಕ್ಷೆಯನ್ನು ಒಂಬತ್ತು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದಾರೆ. ನೀಟ್-ಯುಜಿಗೆ ಸರಿಸುಮಾರು 24 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ನೆಟ್ ಪರೀಕ್ಷೆಯನ್ನು ರದ್ದುಪಡಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ‘ಪರೀಕ್ಷೆಯಲ್ಲಿ ಲೋಪಗಳಾಗಿರಬಹುದು’ ಎಂಬ ಕಾರಣ ನೀಡಿದೆ.
ಈ ವಿಚಾರವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗುತ್ತದೆ ಎಂದು ಹೇಳಿದೆ. ಅಂದರೆ, ಪರೀಕ್ಷೆಯು ನ್ಯಾಯಸಮ್ಮತವಲ್ಲದ ಬಗೆಯಲ್ಲಿ ನಡೆದಿದೆ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಂತೆ ಆಯಿತು. ಆದರೆ ಯಾವ ರೀತಿಯ ಅಕ್ರಮಗಳು ನಡೆದಿವೆ ಹಾಗೂ ಯಾರು ಆ ಕೃತ್ಯ ಎಸಗಿದ್ದಾರೆ ಎಂಬುದನ್ನು ಸರ್ಕಾರವು ಸ್ಪಷ್ಟಪಡಿಸಿಲ್ಲ. ನೀಟ್ ಅನ್ನು ವೈದ್ಯಕೀಯ ಹಾಗೂ ಅದಕ್ಕೆ ಸಂಬಂಧಿಸಿದ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆಯನ್ನು ನಿರ್ಣಯಿಸಲು ನಡೆಸಲಾಗಿದೆ. ನೆಟ್ ಪರೀಕ್ಷೆಯನ್ನು ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಹಾಗೂ ಕಿರಿಯ ಸಂಶೋಧನಾ ಫೆಲೊಗಳ ಅರ್ಹತೆಯನ್ನು ತೀರ್ಮಾನಿಸಲು ನಡೆಸಲಾಗಿದೆ.
ಮೊನ್ನೆ ನೀಟ್ ಅಂದರೆ ಈಗ ನೆಟ್ ಪರೀಕ್ಷೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎನ್ನಲಾಗ್ತಿದೆ. ಅಲ್ಲದೇ, ನೀಟ್,ನೆಟ್ ಪರೀಕ್ಷಾ ಅಕ್ರಮದ ವಿರುದ್ಧ ಸೂಕ್ತ ತನಿಖೆಗೆ AIDSO ಆಗ್ರಹಿಸಿದೆ. ಇನ್ನು ನ್ಯಾಯಕ್ಕಾಗಿ all India democratic students organization ಡಿಮ್ಯಾಂಡ್ ಮಾಡಿದೆ. ನ್ಯಾಯ ಸಿಗದೇ ಹೋದ್ರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದೆ. ಈ ಮೂಲಕ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವರ್ಷಗಟ್ಟಲೆ ಮಾಡಿದ ಪರೀಕ್ಷೆ ತಯಾರಿ ನೀರಲ್ಲಿ ಹೋಮ ಮಾಡಿದಾಗ ಆಗಿದೆ.
ಎಲ್ಲದಕ್ಕೂ ಮಿಗಿಲಾಗಿ ಎನ್ ಟಿಎ ಬೇಜವಾಬ್ದಾರಿ..ಹೌದು,NTA ಪಾರದರ್ಶಕತೆಯ ಕೊರತೆ ಮಿಲಿಯಾಂತರ ಅಭ್ಯರ್ಥಿಗಳ ಭವಿಷ್ಯ ಇದೀಗ ಅತಂತ್ರವಾಗಿದೆ… ಸದ್ಯ ಪ್ರಕರಣವು ತಾರ್ಕಿಕ ಅಂತ್ಯ ತಲುಪುಔರೆಗೂ ನೀಟ್ ಕೌನ್ಸಿಲಿಂಗ್ ತಡೆಹಿಡಿಯಲು ಒತ್ತಾಯಿಸಲಾಗಿದೆ.