August 19, 2025
renukaswamy-darshan-1718708124

ರೇಣುಕಾಸ್ವಾಮಿ ಕೊಲೆ ಕೇಸ್ ಹಾಗೂ ಹಳೆ ಕೇಸ್‌ಗಳನ್ನು ಸೇರಿಸಿ ದರ್ಶನ್‌ ಮೇಲೆ ರೌಡಿ ಶೀಟರ್​ ಓಪನ್ ತೆರೆಯಲು ಸಿದ್ಧತೆ ಆಗುತ್ತಿದೆ ಎನ್ನಲಾಗಿದೆ. ಮಾಹಿತಿ ಪ್ರಕಾರ ದರ್ಶನ್ ಪುಡಿ ರೌಡಿಗಳ ಗ್ಯಾಂಗ್ ಕಂಡು ಪೊಲೀಸರು ಕೂಡ ಶಾಕ್‌ ಆಗಿದ್ದಾರೆ. ಬೆಂಗಳೂರು ಸೇರಿದಂತೆ ಪ್ರತೀ ಜಿಲ್ಲೆಯಲ್ಲೂ ರೌಡಿಗಳ ಗ್ಯಾಂಗ್ ಕಟ್ಟಿದ್ದಾರಂತೆ ದರ್ಶನ್. ಆರೋಪಿಗಳ ವಿಚಾರಣೆಯಲ್ಲಿ ದರ್ಶನ್ ಬಗ್ಗೆ ಈ ನಿಜಬಣ್ಣವನ್ನು ಹೊರಹಾಕಿದ್ದಾರೆ ಪೊಲೀಸರು. ಅಸಲಿಗೆ ಕಾನೂನು ಅನ್ನೋದು ಲೆಕ್ಕಕ್ಕೇ ಇಲ್ಲದಂತೆ ದರ್ಶನ್‌ ವರ್ತಿಸುತ್ತಿದ್ದರು ಎನ್ನಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿ ಒಂಭತ್ತು ದಿನ ಕಳೆದಿದ್ದಾರೆ ದರ್ಶನ್.

ಜೂನ್ 11ರ ಮಂಗಳವಾರ ದರ್ಶನ್ ಬಂಧನವಾಗಿದ್ದರು. ಜೂನ್ 11 ರಿಂದ ಇಂದಿನವರೆಗೂ ಪೊಲೀಸ್ ಕಸ್ಟಡಿಯಲ್ಲಿಯೇ ಇದ್ದಾರೆ ನಟ ದರ್ಶನ್. ಸಿನಿಮಾ, ಶೂಟಿಂಗ್ ಎಂದು ಓಡಾಡ್ತಿದ್ದ ನಟನಿಗೆ ಈಗ ಪೊಲೀಸ್ ಠಾಣೆಯಲ್ಲಿ ವಾಸ. ನಾಳೆ ದರ್ಶನ್ ಆಂಡ್ ಗ್ಯಾಂಗ್ ಪೊಲೀಸ್ ಕಸ್ಟಡಿಗೆ ಅಂತ್ಯವಾಗಲಿದೆ. ನಾಳೆ ಕೋರ್ಟ್‌ಗೆ ದರ್ಶನ್‌ ಹಾಗೂ ಗ್ಯಾಂಗ್‌ವನ್ನು ಪೊಲೀಸರು ಹಾಜರು ಪಡಿಸಲಿದ್ದಾರೆ. ಪ್ರಕರಣದ ತನಿಖೆ ಸಂಬಂಧ ಪೇಪರ್ ವರ್ಕ್ ಕೂಡ ಪೊಲೀಸರು ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಮತ್ತೆ ಪುನಃ ಕಸ್ಟಡಿಗೆ ಕೇಳದಿರಲು ಪೊಲೀಸರು ನಿರ್ಧಾರ ಮಾಡಿರುವುದಾಗಿ ವರದಿಯಾಗಿದೆ. ಬಹುತೇಕ ನಾಳೆ ದರ್ಶನ್, ಪವಿತ್ರಗೌಡ ಸೇರಿದಂತೆ ಎಲ್ಲರೂ ಪರಪ್ಪನ ಅಗ್ರಹಾರ ಜೈಲು ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ

Leave a Reply

Your email address will not be published. Required fields are marked *