ಚೀನಾದ ಒಂದು ವಿಶಿಷ್ಟ ಪ್ರೇಮಕಥೆ ಇದೀಗ 23 ವರ್ಷದ ಹುಡುಗಿ 80 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಇದಕ್ಕಾಗಿ ಆಕೆ ಕೆಲದಿನಗಳ ಹಿಂದೆಯೇ ತನ್ನ ಕುಟುಂಬವನ್ನು ತೊರೆದು ಬಂದಿದ್ದಾಳೆ. “ನಮ್ಮಿಬ್ಬರ ಆಸಕ್ತಿಗಳು ಮತ್ತು ಹವ್ಯಾಸಗಳು ಒಂದೇ ಆಗಿದ್ದು, ಇದು ನಮ್ಮನ್ನು ಪರಸ್ಪರ ಹತ್ತಿರಕ್ಕೆ ತರಲು ಕಾರಣವಾಯಿತು” ಎಂದು ಯುವತಿ ಹೇಳಿರುವುದು ವರದಿಯಾಗಿದೆ.
ಈ ಲವ್ ಸ್ಟೋರಿ ಚೀನಾದ ಹೆಬೈ ಪ್ರಾಂತ್ಯದದ್ದು. ವಾಸ್ತವವಾಗಿ, ಇಲ್ಲಿ 23 ವರ್ಷದ ಯುವತಿಯೊಬ್ಬಳು ನರ್ಸಿಂಗ್ ಹೋಂನಲ್ಲಿ ಭೇಟಿಯಾದ 80 ವರ್ಷದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಆಡಿಟಿ ಸೆಂಟ್ರಲ್ ವೆಬ್‌ಸೈಟ್‌ನ ವರದಿಯ ಪ್ರಕಾರ, ಹೆಬೈ ಪ್ರಾಂತ್ಯದ ನರ್ಸಿಂಗ್ ಹೋಂನಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡುವಾಗ ಹುಡುಗಿ 80 ವರ್ಷದ ವ್ಯಕ್ತಿಯನ್ನು ಭೇಟಿಯಾದಳು. ನಂತರ ಇಬ್ಬರೂ ಸ್ನೇಹಿತರಾಗಿದ್ದರು. ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಿದ್ದಾರೆ.
ಈ ಸಂಬಂಧಕ್ಕೆ ಮನೆಯವರು ಒಪ್ಪದ ಕಾರಣ, ಯುವತಿ ತನ್ನ ಪೋಷಕರನ್ನು ತೊರೆದು ಬಂದು ವಯಸ್ಸಾದ ವ್ಯಕ್ತಿಯನ್ನು ವಿವಾಹವಾಗಿದ್ದಾಳೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಮದುವೆ ಬಗ್ಗೆ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಡುಗಿ ಹಣ ಕ್ಕಾಗಿ ಮುದುಕನನ್ನು ಮದುವೆಯಾಗಿರಬೇಕು ಎಂದು ಜನರು ಹೇಳುತ್ತಾರೆ, ಕೆಲವರು ಇದನ್ನು ವಯಸ್ಸಿಗೆ ಮೀರಿದ ಪ್ರೇಮಕಥೆ ಎಂದು ಕರೆಯುತ್ತಿದ್ದಾರೆ.
ಈ ಸಂಬಂಧಕ್ಕೆ ಮನೆಯವರು ಒಪ್ಪದ ಕಾರಣ, ಯುವತಿ ತನ್ನ ಪೋಷಕರನ್ನು ತೊರೆದು ಬಂದು ವಯಸ್ಸಾದ ವ್ಯಕ್ತಿಯನ್ನು ವಿವಾಹವಾಗಿದ್ದಾಳೆ.ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಮದುವೆ ಬಗ್ಗೆ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಡುಗಿ ಹಣಕ್ಕಾಗಿ ಮುದುಕನನ್ನು ಮದುವೆಯಾಗಿರಬೇಕು ಎಂದು ಜನರು ಹೇಳುತ್ತಾರೆ, ಕೆಲವರು ಇದನ್ನು ವಯಸ್ಸಿಗೆ ಮೀರಿದ ಪ್ರೇಮಕಥೆ ಎಂದು ಕರೆಯುತ್ತಿದ್ದಾರೆ.