May 9, 2025
KSRTC-Introduces-Advanced-Hybrid-Sleeper-Buses-for-Thiruvananthapuram-Kasaragod-Route

ಹುಬ್ಬಳ್ಳಿ: 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಅವಧಿಗೆ ಸ್ಮಾರ್ಟ್ ಕಾರ್ಡ್ ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ವಿತರಣೆ ಪ್ರಕ್ರಿಯೆ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಬಸ್ ಪಾಸ್ ಪಡೆಯಬಹುದಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದ ಅವಧಿಗೆ ಶಾಲೆಗಳು ಮತ್ತು ಪದವಿಪೂರ್ವ ಕಾಲೆಜು ತರಗತಿಗಳು ಆರಂಭವಾಗಿರುವ ಪ್ರಯುಕ್ತ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ (ಇಡಿಸಿಎಸ್) ಸಹಯೋಗದಲ್ಲಿ ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.
ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು. URL-http://sevasindhuservices.karnataka.gov.in/buspassservices
ಅಗತ್ಯವಿರುವ ದಾಖಲೆಗಳು: ಆಧಾರ ಕಾರ್ಡ್, ಶಾಲಾ-ಕಾಲೇಜು ಶುಲ್ಕ ಪಾವತಿ ರಶೀದಿ, ಘೋಷಣಾ ಪತ್ರ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಪ್ರಮಾಣಪತ್ರ.
ಸೇವಾಸಿಂಧು ಪೋರ್ಟಲ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಹುಬ್ಬಳ್ಳಿ-ಧಾರವಾಡ ಇನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳ ಮೂಲಕವೂ ಸಲ್ಲಿಸಬಹುದು. ರೂ.30ಶುಲ್ಕ ವಿಧಿಸಲಾಗುತ್ತದೆ.
ಅರ್ಜಿ ಅನುಮೋದನೆಯಾದ ನಂತರ ಪಾಸ್ ಪಡೆಯಲು ಭೇಟಿ ನೀಡಬೇಕಾದ ಕರ್ನಾಟಕ ಒನ್ ಕೇಂದ್ರದ ಮಾಹಿತಿಯನ್ನು ವಿದ್ಯಾರ್ಥಿಯ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಸದರಿ ಕೇಂದ್ರದಲ್ಲಿ ನಿಗಧಿತ ಶುಲ್ಕವನ್ನು ಪಾವತಿಸಿ ಬಸ್ ಪಾಸ್ ಪಡೆಯಬಹುದಾಗಿದೆ. ಶುಲ್ಕವನ್ನು ನಗದು,ಕ್ರೆಡಿಟ್ ಕಾರ್ಡ್,ಡೆಬಿಟ್ ಕಾರ್ಡ್ ಅಥವ ಯುಪಿಐ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *