July 1, 2025
n6138729721717313822303d2c7977c90547cf7425835963b38847a4900fe631c66d467cd98bcab54e3f7ce

ಹುಬ್ಬಳ್ಳಿ: ಲವ್ ಜಿಹಾದ್ ಗೆ ಸಿಲುಕಿರುವ ಯುವತಿಯರ ರಕ್ಷಣೆಗಾಗಿ ಶ್ರೀರಾಮ ಸೇನೆ ಆರಂಭಿಸಿರುವ ಹೆಲ್ಪ್ ಲೈನ್ ಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಶ್ರೀರಾಮಸೇನೆ ಮುಖಂಡ ಗಂಗಾಧರ ಕುಲಕರ್ಣಿ ತಿಳಿಸಿದ್ದಾರೆ. ಮೇ 29ರಂದು ಶ್ರೀರಾಮ ಸೇನೆ ಹಿಂದೂ ಮಹಿಳೆಯರ ರಕ್ಷಣೆಗಾಗಿ ಹೆಲ್ಪ್ ಲೈನ್ ಆರಂಭಿಸಿತ್ತು.
ಕಳೆದ ನಾಲ್ಕು ದಿನಗಳಲ್ಲಿ 400ಕ್ಕೂ ಹೆಚ್ಚು ಯುವತಿಯರು ಕರೆ ಮಾಡಿದ್ದಾರೆ. ಜೊತೆಗೆ ಹೆಲ್ಪ್ ಲೈನ್ ವಿರುದ್ಧವೂ 17 ಕರೆಗಳು ಬಂದಿವೆ. 17 ಕರೆಗಳು ಹೆಲ್ಪ್ ಲೈನ್ ಆರಂಭಿಸಿದ್ದಕ್ಕೆ ಬೆದರಿಕೆ ಹಾಕಿರುವ ಕರೆಗಳಾಗಿವೆ.
ಇನ್ನು ಶ್ರೀರಾಮ ಸೇನೆ ಹೆಲ್ಪ್ ಲೈನ್ ಗೆ 37 ತಾಯಂದಿರು ಕರೆ ಮಾಡಿದ್ದಾರೆ. 42 ಪ್ರೋತ್ಸಾಹಕ ಕತೆಗಳು, 52 ಲವ್ ಜಿಹಾದ್ ಸಂತ್ರಸ್ತ ಕರೆಗಳು ಬದಿವೆ. ಹೊರ ರಾಜ್ಯದಿಂದಲೂ ಕರೆ ಮಾಡಿ ಶ್ರೀರಾಮ ಸೇನೆಗೆ ಅಭಿನಂದಿಸಿದ್ದಾರೆ ಎಂದು ವಿವರಿಸಿದರು.
ಈ ನಡುವೆ ಸಹಾಯವಾಣಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ಜಾಲತಾಣಗಳಲ್ಲಿಯೂ ಹೆಲ್ಪ್ ಲೈನ್ ಬ್ಲಾಕ್ ಮಾಡಲಾಗಿದೆ. ಫೇಸ್ ಬುಕ್, ವಾಟ್ಸಾಪ್ ಗಳನ್ನು ಬ್ಲಾಕ್ ಮಾಡಿದ್ದಾರೆ. ಶ್ರೀರಾಮ ಸೇನೆಯ ಸಹಾಯವಾಣಿ ಸರಿಯಾಗಿ ಕೆಲಸ ಮಾಡುತ್ತಿದೆ ಎಂದು ವಿರೋಧಿಗಳಿಗೆ ಬೆಂಕಿ ಬಿದ್ದಿದೆ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *