November 19, 2024

ಬೆಂಗಳೂರು: ರಾಜ್ಯದ ವಸತಿ ಶಾಲೆಗಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-2009ರ ( RTE) ಅಂಶಗಳು ಅನ್ವಯವಾಗುತ್ತವೆ ಎಂಬುದಾಗಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಈ ಸಂಬಂಧ ಮೈಸೂರಿನ ಜ್ಞಾನ ಸರೋವರ ಎಜುಕೇಷನ್ ಟ್ರಸ್ಟ್ ಸಲ್ಲಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದಂತ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿತು. ಈ ವೇಳೆಯಲ್ಲಿ ಸರ್ಕಾರದಿಂದ ಯಾವುದೇ ಅನುದಾನ ಪಡೆಯದೇ ಐಸಿಎಸ್‌ಇ ಪಠ್ಯಕ್ರಮದ ಶಾಲೆ ನಡೆಸುತ್ತಿರುವ ಜ್ಞಾನ ಸರೋವರ ಎಜುಕೇಷನ್ ಟ್ರಸ್ಟ್, ಆರ್ ಟಿಇ ಕಾಯ್ದೆಯಲ್ಲಿನ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ಶಿಕ್ಷಣ ಇಲಾಖೆ 1.61 ಕೋಟಿ ದಂಡ ವಿಧಿಸಿದ್ದನ್ನು ಪ್ರಶ್ನಿಸಿ ಶಾಲೆ ಸಲ್ಲಿಸಿದ್ದಂತ ಅರ್ಜಿಯನ್ನು ನ್ಯಾಯಪೀಠವು ವಜಾಗೊಳಿಸಿತು.
ಇನ್ನೂ ಆರ್ ಟಿಇ ಕಾಯ್ದೆಯ ಅಧಿಸೂಚನೆಯನ್ನು 2012ರ ಏಪ್ರಿಲ್ 28ರಂದು ಹೊರಡಿಸಲಾಗಿದೆ. ಇದಾದ ನಂತ್ರ ಆರು ತಿಂಗಳಲ್ಲಿ ಶಾಲೆಯನ್ನು ನೋಂದಣಿ ಮಾಡಿ ಮಾನ್ಯತೆ ಪಡೆಯಬೇಕಿತ್ತು. ಆದ್ರೇ ಪಡೆದಿಲ್ಲ. ಆ ಮೂಲಕ ನಿಯಮ ಉಲ್ಲಂಘನೆ ಮಾಡಲಾಗಿದೆ ಅಂತ ಹೇಳಿತು. ಇದು ಇಲಾಖೆ ವಿಧಿಸಿರುವ ದಂಡದ ಕ್ರಮ ಸರಿಯೇ ಇದೆ ಎಂಬುದಾಗಿ ನ್ಯಾಯಪೀಠ ಅಭಿಪ್ರಾಯ ಪಟ್ಟಿತು.
ನ್ಯಾಯಪೀಠದ ಮುಂದೆ ನಮ್ಮದು ವಸತಿ ಶಾಲೆ. ವಸತಿ ಶಾಲೆ ಆರ್ ಟಿಇ ಕಾಯ್ದೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬುದಾಗಿ ಶಾಲಾ ಮಂಡಳಿ ಉತ್ತರಿಸಿತ್ತು. ಶಿಕ್ಷಣ ಇಲಾಖಎ ಶಾಲೆಯು ಆರ್ ಟಿ ಇ ಕಾಯ್ದೆಯನ್ನು ಪಾಲನೆ ಮಾಡಿಲ್ಲ ಅಂತ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಶಾಲೆಯು ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದಂತ ನ್ಯಾಯಪೀಠವು ವಸತಿ ಶಾಲೆಗಳಿಗೂ ಆರ್ ಟಿಇ ಕಾಯ್ದೆ ಅನ್ವಯವಾಗಲಿದೆ ಎಂಬುದಾಗಿ ಮಹತ್ವದ ತೀರ್ಪು ನೀಡಿದೆ.

Leave a Reply

Your email address will not be published. Required fields are marked *